alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ನೋಡಲು ಬಂದ ಮಕ್ಕಳ ಮುಖಕ್ಕೆ ಸೀಲು ಒತ್ತಿದ್ರು..!

master_1

ರಕ್ಷಕರೇ ಭಕ್ಷಕರಾಗುವ, ವಿನಾ ಕಾರಣ ಹಿಂಸೆ ನೀಡುವ ಪೊಲೀಸರ ಬಗ್ಗೆ ಕೇಳಿರುತ್ತೀರಾ. ಮಧ್ಯಪ್ರದೇಶದ  ಭೋಪಾಲ್ ಪೊಲೀಸರು ಸ್ವಲ್ಪ ಮುಂದೆ ಹೋಗಿದ್ದಾರೆ. ಮಾನವೀಯತೆ ಮರೆತು ಮನುಕುಲ ಮುಜುಗರಪಡುವಂತಹ ಕೆಲಸ ಮಾಡಿದ್ದಾರೆ.

ಮಾಹಿತಿ ಪ್ರಕಾರ, ರಕ್ಷಾಬಂಧನದ ದಿನ ಇಬ್ಬರು ಮಕ್ಕಳು ತನ್ನ ತಂದೆಯನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದರಂತೆ. ಜೈಲಿನ ಸಿಬ್ಬಂದಿ ಮಕ್ಕಳ ಮುಖಕ್ಕೆ ಸೀಲು ಒತ್ತಿದ್ದಾರೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಎಡಿಜಿ ತನಿಖೆಗೆ ಆದೇಶ ನೀಡಿದ್ದಾರೆ. ಆದ್ರೆ ಸೆಂಟ್ರಲ್ ಜೈಲಿನ ಅಧೀಕ್ಷಕ ದಿನೇಶ್ ಸಿಬ್ಬಂದಿ ತಪ್ಪು ಮಾಡಿದ್ದಾರೆಂಬುದನ್ನು ಒಪ್ಪಿಕೊಳ್ಳುತ್ತಿಲ್ಲ.

ಕೆಲ ಜೈಲಿನಲ್ಲಿ ಖೈದಿಗಳನ್ನು ಭೇಟಿಯಾಗಲು ಬರುವ ಜನರ ಕೈ ಮೇಲೆ ಸೀಲು ಹಾಕುವ ಪದ್ಧತಿಯಿದೆ. ಈ ಮಕ್ಕಳಿಗೆ ಮುಖದ ಮೇಲೆ ಸೀಲು ಒತ್ತಲಾಗಿದೆ.

ಯಾವ ಜೈಲಿನಲ್ಲಿಯೂ ಖೈದಿಯನ್ನು ನೋಡಲು ಬರುವ ಜನರ ದೇಹದ ಮೇಲೆ ಸೀಲು ಹಾಕಬೇಕೆಂದು ಜೈಲಿನ ಕೈಪಿಡಿಯಲ್ಲಿ ಹೇಳಲಾಗಿಲ್ಲ. ಕೆಲ ಜೈಲಿನಲ್ಲಿ ಈ ಪದ್ಧತಿ ರೂಢಿಯಲ್ಲಿದೆ. ಕೈ ಮೇಲೆ ಸೀಲು ಹಾಕಲಾಗುತ್ತದೆ. ಆದ್ರೆ ಮಕ್ಕಳ ಮುಖಕ್ಕೆ ಸೀಲು ಒತ್ತಿರುವುದು ತಪ್ಪು ಎಂದಿದರುವ ಡಿಜಿಪಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...