alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದ ಸರ್ಕಾರ

ನವದೆಹಲಿ: ಬಾಡಿಗೆ ತಾಯಿಯಿಂದ ಮಗು ಪಡೆಯುವ ಮಹಿಳಾ ಉದ್ಯೋಗಿಗಳಿಗೂ 180 ದಿನ ರಜೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಸಿಬ್ಬಂದಿ ಸಚಿವಾಲಯದಿಂದ ಈ ಕುರಿತು ಮಾಹಿತಿ ನೀಡಲಾಗಿದ್ದು, ಬಾಡಿಗೆ ತಾಯಿಯಿಂದ ಮಗು ಪಡೆಯುವ ಕೇಂದ್ರ ಸರ್ಕಾರದ ಮಹಿಳಾ ನೌಕರರಿಗೆ 6 ತಿಂಗಳ ಕಾಲ ವೇತನ ಸಹಿತ ರಜೆ ನೀಡುವಂತೆ ತಿಳಿಸಲಾಗಿದೆ.

2015 ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ಅನ್ವಯ ಎಲ್ಲಾ ಇಲಾಖೆಗಳಿಗೆ ಸಚಿವಾಲಯದಿಂದ ಪತ್ರ ಬರೆಯಲಾಗಿದೆ. ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಯೊಬ್ಬರು ಬಾಡಿಗೆ ತಾಯಿಯಿಂದ ಮಗು ಪಡೆದಿದ್ದ ಕಾರಣಕ್ಕೆ ರಜೆ ನೀಡಿರಲಿಲ್ಲ. ಬಾಡಿಗೆ ತಾಯಿಯಿಂದ ಮಗು ಪಡೆದ ಮಹಿಳೆಯೂ ಹೆರಿಗೆ ರಜೆ ಪಡೆಯಬಹುದು ಎಂದು ಕೋರ್ಟ್ ಹೇಳಿತ್ತು.

ಈ ಹಿನ್ನಲೆಯಲ್ಲಿ ಕೇಂದ್ರ ಸಿಬ್ಬಂದಿ ಸಚಿವಾಲಯ ಬಾಡಿಗೆ ತಾಯಿಯಿಂದ ಮಗು ಪಡೆದ ಮಹಿಳಾ ಉದ್ಯೋಗಿಗಳಿಗೆ 6 ತಿಂಗಳು ಹೆರಿಗೆ ರಜೆ ನೀಡಲು ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...