alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸತ್ ಸದಸ್ಯರಿಗೆ ಲಾಟರಿ : ಭತ್ಯೆಯಲ್ಲಿ ಭರ್ಜರಿ ಏರಿಕೆ

ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಮುಖದಲ್ಲಿ ನಗು ಮೂಡಿದೆ. ಸದಸ್ಯರ ಭತ್ಯೆಯಲ್ಲಿ ಭಾರೀ ಏರಿಕೆಯಾಗಿದೆ. 40 ಸಾವಿರ ರೂಪಾಯಿ ಏರಿಕೆ ಮಾಡುವ ಪ್ರಸ್ತಾವನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ ಹೊಸ ಭತ್ಯೆಗಳು ಏಪ್ರಿಲ್ ನಿಂದ ಜಾರಿಗೆ ಬರಲಿವೆ.

ಫೆಬ್ರವರಿ 28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಕ್ಷೇತ್ರ ಭತ್ಯೆ ಹಾಗೂ ಕಚೇರಿ ಭತ್ಯೆಯಲ್ಲೂ ಏರಿಕೆಯಾಗಿದೆ. ಸಂಸದರಿಗೆ ಇನ್ಮುಂದೆ ಕ್ಷೇತ್ರ ಭತ್ಯೆ ರೂಪದಲ್ಲಿ ಪ್ರತಿ ತಿಂಗಳು 45 ಸಾವಿರ ರೂಪಾಯಿ ಬದಲು 70 ಸಾವಿರ ರೂಪಾಯಿ ಸಿಗಲಿದೆ. ಕಚೇರಿ ಭತ್ಯೆಯಾಗಿ 45 ಸಾವಿರ ರೂಪಾಯಿ ಬದಲು ಸಂಸದರು 60 ಸಾವಿರ ರೂಪಾಯಿ ಪಡೆಯಲಿದ್ದಾರೆ.

ಈ ಎರಡು ಭತ್ಯೆ ಜೊತೆ ಪೀಠೋಪಕರಣ ಭತ್ಯೆಯಲ್ಲೂ ಏರಿಕೆಯಾಗಿದೆ. 75 ಸಾವಿರ ರೂಪಾಯಿ ಬದಲು 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಪ್ರತಿ ಐದು ವರ್ಷಕ್ಕೆ ಈ ಭತ್ಯೆಗಳ ಪರಿಷ್ಕರಣೆ ನಡೆಯಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...