alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡನೋಡುತ್ತಿದ್ದಂತೆ ಮಂಟಪದಲ್ಲೇ ಕುಸಿದು ಬಿದ್ದ ವರ

ಶುಭ ಕಾರ್ಯದಲ್ಲಿ ಪಟಾಕಿ, ಸಿಡಿಗುಂಡು ಸಿಡಿಸೋದು ಕಾಮನ್ ಆದರೆ ಈ ಸಂಭ್ರಮ ಇಲ್ಲಿ ಒಂದು ಜೀವವನ್ನೇ ಬಲಿ ಪಡೆದಿದೆ. ಮದುವೆಯ ಸಂಭ್ರಮದ ವೇಳೆ ಗುಂಡು ಹಾರಿಸಿದಾಗ ದುರಾದೃಷ್ಟವಶಾತ್ ವರನೇ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಲಕಿಂಪುರ ಕೇರಿ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ರಾಂಪುರ ಎಂಬ ಹಳ್ಳಿಯಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಮದುವೆಗೆ ಬಂದಿದ್ದ ರಾಮಚಂದ್ರ ಎಂಬಾತ ಮದುವೆಯ ಸಂಭ್ರಮಕ್ಕಾಗಿ ಲೈಸೆನ್ಸ್ ಹೊಂದಿದ್ದ ತನ್ನ ಗನ್ ನಿಂದ ಎರಡು ಗುಂಡು ಹಾರಿಸಿದ್ದಾನೆ.

ಆದರೆ ಅದು ಗುರಿತಪ್ಪಿ ಪೂಜೆಯಲ್ಲಿ ತೊಡಗಿದ್ದ ವರ ಸುನೀಲ್ ವರ್ಮಾ ಎದೆಗೆ ತಾಕಿದ್ದು, ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಎಲ್ಲ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿ ರಾಮಚಂದ್ರನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...