alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಭ್ರಮಾಚರಣೆಯ ‘ಫೈರಿಂಗ್’ಗೆ ಮದುಮಗನೇ ಬಲಿ

ವಿವಾಹ ಸಮಾರಂಭದಲ್ಲಿ ಸಂಭ್ರಮದಿಂದ ಗುಂಡು ಹಾರಿಸುವ ಪದ್ದತಿ ವಿವಿಧೆಡೆ ಚಾಲ್ತಿಯಲ್ಲಿದೆ. ಈ ಸಂಭ್ರಮವೇ ಸಾವಿಗೆ ಕಾರಣವಾಗುತ್ತಿರುವ ಹಲವು ಘಟನೆಗಳು ನಡೆದಿದ್ದರೂ ಜನ ಮಾತ್ರ ಬುದ್ದಿ ಕಲಿತಿಲ್ಲ.

ಈಗ ಮತ್ತೊಂದು ಅಂತಹುದೇ ಮತ್ತೊಂದು ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದ್ದು, ಈ ಅವಘಡದಲ್ಲಿ ವರನೇ ಸಾವಿಗೀಡಾಗಿದ್ದಾನೆ. ಈಶಾನ್ಯ ದೆಹಲಿಯ ಸೀಮಾಪುರಿಯಲ್ಲಿ ಮಂಗಳವಾರದಂದು ಈ ದುರ್ಘಟನೆ ನಡೆದಿದ್ದು, ಮದುವೆ ಮೆರವಣಿಗೆಯಲ್ಲಿ ಬರುತ್ತಿದ್ದ ವರ 21 ವರ್ಷದ ದೀಪಕ್ ಕುಮಾರ್ ಸಂಭ್ರಮಾಚರಣೆಯ ಫೈರಿಂಗ್ ಗೆ ಬಲಿಯಾಗಿದ್ದಾನೆ.

ವರನ ದೂರದ ಸಂಬಂಧಿಯೊಬ್ಬ ಸಂಭ್ರಮಾಚರಣೆಗಾಗಿ ಗುಂಡು ಹಾರಿಸಿದ್ದು, ಇದು ದೀಪಕ್ ಕುಮಾರನ ಬೆನ್ನಿಗೆ ಹೊಕ್ಕಿದೆ. ಕುಸಿದು ಬಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...