alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಭ್ರಮಾಚರಣೆಯಲ್ಲೇ ಹಾರಿದ ಗುಂಡು, ನಡೀತು ಅವಘಡ

ಚಂಡೀಗಢ: ಮದುವೆ ಸಂಭ್ರಮಾಚರಣೆಯಲ್ಲಿ ನಡೆದ ಫೈರಿಂಗ್ ನಲ್ಲಿ ಎನ್.ಆರ್.ಐ. ವರ ಮೃತಪಟ್ಟ ದಾರುಣ ಘಟನೆ ಹರಿಯಾಣದ ಕೈಥಾಲ್ ಜಿಲ್ಲೆಯ ಗುಲ್ಹಾ ಪಟ್ಟಣದಲ್ಲಿ ನಡೆದಿದೆ.

ಸ್ವಿಟ್ಜರ್ ಲೆಂಡ್ ನಲ್ಲಿರುವ ವಿಕ್ರಮ್ ಅವರ ಮದುವೆ ಬಂಧು ಬಳಗದವರು, ಆತ್ಮೀಯರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿದೆ. ವರನ ಹತ್ತಿರದ ಸಂಬಂಧಿಯೊಬ್ಬರು ಸಂಭ್ರಮಾಚರಣೆ ವೇಳೆ ಫೈರಿಂಗ್ ಮಾಡಿದ್ದು, ಆಕಸ್ಮಿಕವಾಗಿ ವಿಕ್ರಮ್ ಗೆ ಗುಂಡು ತಗುಲಿದೆ.

ಗಂಭೀರ ಸ್ಥಿತಿ ತಲುಪಿದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗಿದೆ ಎಂದು ಕೈಥಾಲ್ ಪೊಲೀಸ್ ಅಧಿಕಾರಿ ಸಮರ್ ಸಿಂಗ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...