alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಲ್ಲಾಸ್ಪತ್ರೆಯ 100 ಸೀಲಿಂಗ್ ಫ್ಯಾನ್ ಗೆ ಕನ್ನ

ಮಧ್ಯಪ್ರದೇಶದ ಶಿವಪುರಿಯ ಜಿಲ್ಲಾ ಆಸ್ಪತ್ರೆಯಲ್ಲಿ 100 ಸೀಲಿಂಗ್ ಫ್ಯಾನ್ ನಾಪತ್ತೆಯಾಗಿದೆ. ಪೊಲೀಸರು ತನಿಖೆ ಶುರುಮಾಡಿದ್ದಾರೆ.

ಜಿಲ್ಲಾ ಆಸ್ಪತ್ರೆ ವೈದ್ಯ ಡಾ. ಜೆ.ಎಸ್. ತ್ರಿವೇದಿ ಪ್ರಕಾರ, ಆಸ್ಪತ್ರೆಯಲ್ಲಿ ಮೆಡಿಕಲ್ ಹಾಗೂ ಮಕ್ಕಳ ವಾರ್ಡ್ ಕೊಠಡಿಯನ್ನು ಮರು ನಿರ್ಮಾಣ ಮಾಡಲಾಗ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಸೀಲಿಂಗ್ ಫ್ಯಾನ್ ಗಳನ್ನು ಸ್ಟೋರ್ ರೂಂನಲ್ಲಿ ಇಡಲಾಗಿತ್ತು. ಆಸ್ಪತ್ರೆಯಲ್ಲಿ ಫ್ಯಾನ್ ಕಳ್ಳತನವಾಗಿರುವ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ತ್ರಿವೇದಿ ಹೇಳಿದ್ದಾರೆ.

ಕಳ್ಳತನವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತನಿಖೆ ನಡೆಸುತ್ತಿದ್ದೇವೆ. ಆದ್ರೆ ಈವರೆಗೂ ಜಿಲ್ಲಾಸ್ಪತ್ರೆ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳ್ಳತನವಾದ ಸೀಲಿಂಗ್ ಫ್ಯಾನ್ ಬೆಲೆ ಸುಮಾರು 1 ಲಕ್ಷಕ್ಕಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. 2015ರಲ್ಲಿ ಶಿವಪುರಿ ಜಿಲ್ಲಾಸ್ಪತ್ರೆಗೆ ಅತ್ಯುತ್ತಮ ಆಸ್ಪತ್ರೆ ಎಂಬ ಪಟ್ಟ ಸಿಕ್ಕಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...