alex Certify
ಕನ್ನಡ ದುನಿಯಾ       Mobile App
       

Kannada Duniya

ಜಾನ್ಸನ್ ಪೌಡರ್ ಕ್ಯಾನ್ಸರ್ ಪ್ರಕರಣ ಬಯಲಾಗ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ

ಜಾನ್ಸನ್ &  ಜಾನ್ಸನ್ ಕಂಪನಿ ಪೌಡರ್ ಬಳಸಲು ಗ್ರಾಹಕರು ಭಯಗೊಳ್ತಿದ್ದಾರೆ. ಅಮೆರಿಕಾದಲ್ಲಿ 22 ಮಹಿಳೆಯರಿಗೆ ಜಾನ್ಸನ್ & ಜಾನ್ಸನ್ ಪೌಡರ್ ಬಳಸಿದ ಕಾರಣ ಕ್ಯಾನ್ಸರ್ ಬಂದಿರುವುದು ದೃಢಪಟ್ಟಿದೆ. ಈ ಸಂಬಂಧ ಜಾನ್ಸನ್ &ಜಾನ್ಸನ್ ಕಂಪನಿಗೆ ಕೋರ್ಟ್ 4.69 ಬಿಲಿಯನ್ ಡಾಲರ್ ದಂಡ ವಿಧಿಸಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ನಿಯಂತ್ರಣ ಸಂಸ್ಥೆ ಜಾನ್ಸನ್ & ಜಾನ್ಸನ್ ಕಂಪನಿಗೆ ಇ-ಮೇಲ್ ಒಂದನ್ನು ಕಳುಹಿಸಿದೆ. ಭಾರತಕ್ಕೆ ಬರುವ ಪೌಡರ್ ನಲ್ಲಿ ಯಾವ ಯಾವ ವಸ್ತುಗಳನ್ನು ಬಳಸಲಾಗ್ತಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ನಿಯಂತ್ರಣ ಸಂಸ್ಥೆ ಸೂಚನೆ ನೀಡಿದೆ. ಅಮೆರಿಕಾದಲ್ಲಿ ಮಾರಾಟವಾಗುವ ಪೌಡರ್ ನಲ್ಲಿ ಯಾವೆಲ್ಲ ವಸ್ತು ಬಳಸಲಾಗಿದೆ ಎಂಬುದರ ವಿವರ ನೀಡುವಂತೆಯೂ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ನಿಯಂತ್ರಣ ಸಂಸ್ಥೆ ಹೇಳಿದೆ.

ಅಮೆರಿಕಾದಲ್ಲಿ ಕ್ಯಾನ್ಸರ್ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಭಾರತಕ್ಕೆ ಬರುವ ಜಾನ್ಸನ್ & ಜಾನ್ಸನ್ ಕಂಪನಿಯಿಂದ ಬಳಕೆದಾರರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...