alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಮಹಿಳೆ ನರಳುತ್ತಾ ಬಿದ್ದಿದ್ದರೂ ತಿರುಗಿಯೂ ನೋಡಲಿಲ್ಲ ದಾರಿಹೋಕರು

ಸಾರ್ವಜನಿಕರು ಮಾನವೀಯತೆಯನ್ನೇ ಮರೆತ ಮತ್ತೊಂದು ಪ್ರಕರಣ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ನಡೆದಿದೆ. ಅಪಘಾತಕ್ಕೀಡಾಗಿದ್ದ 65 ವರ್ಷದ ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ನರಳುತ್ತಾ ಬಿದ್ದಿದ್ದರೂ ದಾರಿಹೋಕರು ಹಾಗೂ ವಾಹನ ಸವಾರರು ನೋಡಿಯೂ ನೋಡದಂತೆ ಸಾಗಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಡೆದುಹೋಗುತ್ತಿದ್ದ ಈ ಮಹಿಳೆಗೆ ವೇಗವಾಗಿ ಬಂದ ಬೈಕ್ ಒಂದು ಡಿಕ್ಕಿ ಹೊಡೆದಿದೆ. ಸವಾರ ಬೈಕ್ ನಿಲ್ಲಿಸದೆ ಪರಾರಿಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ನರಳುತ್ತಾ ನೆಲದ ಮೇಲೆ ಬಿದ್ದಿದ್ದರೂ ಆಕೆಯ ನೆರವಿಗೆ ಕೆಲ ಸಮಯದವರೆಗೂ ಯಾರೊಬ್ಬರೂ ಮುಂದಾಗಿಲ್ಲ.

ಆಕೆಯ ಪಕ್ಕದಿಂದಲೇ ಹಲವು ವಾಹನಗಳು ಹಾದು ಹೋಗಿದ್ದು, ಆಸ್ಪತ್ರೆಗೆ ದಾಖಲಿಸುವ ಗೋಜಿಗೆ ಹೋಗಿಲ್ಲ. ಶಾಕಿಂಗ್ ಸಂಗತಿಯೆಂದರೆ ಕೆಲ ಸರ್ಕಾರಿ ವಾಹನಗಳೂ ಹಾದು ಹೋಗಿದ್ದು ಅವುಗಳಲ್ಲಿದ್ದವರೂ ಮಹಿಳೆಗೆ ಸಹಾಯಹಸ್ತ ಚಾಚಿಲ್ಲ. ಕಡೆಗೆ ಯುವಕನೊಬ್ಬ ಮಹಿಳೆ ನೆರವಿಗೆ ಧಾವಿಸಿದ್ದು, ಅದೇ ಸಮಯದಲ್ಲಿ ಪೊಲೀಸ್ ವಾಹನವೊಂದು ಅಲ್ಲಿಗೆ ಬಂದಿದೆ. ಪೊಲೀಸರು ಕೂಡಲೇ ಮಹಿಳೆಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಅಪಘಾತವೆಸಗಿದ್ದ ಬೈಕ್ ಸವಾರನನ್ನು ಬಂಧಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...