alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಬರಿ ಹುಟ್ಟಿಸುತ್ತೇ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ

cctv-footage_3455ನವಿ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವೊಂದು ಗಾಬರಿ ಹುಟ್ಟಿಸುತ್ತೆ. ಪುಟ್ಟ ಮಕ್ಕಳನ್ನೂ ತಮ್ಮ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುವ ಮಹಿಳೆಯರ ಮುಖವಾಡವನ್ನು ಈ ವಿಡಿಯೋ ತೆರೆದಿಟ್ಟಿದೆ.

ನವಿ ಮುಂಬೈನ ರೆಸ್ಟೋರೆಂಟ್ ಒಂದಕ್ಕೆ ಮೂವರು ಮಹಿಳೆಯರು ಇಬ್ಬರು ಮಕ್ಕಳೊಂದಿಗೆ ಬಂದಿದ್ದಾರೆ. ತಲೆ ಮೇಲೆ ದುಪ್ಪಟ್ಟಾ ಹೊದ್ದಿದ್ದ ಮಹಿಳೆಯರು ಪರಿಚಾರಕರ ಗಮನ ಬೇರೆಡೆ ಸೆಳೆದ ವೇಳೆ ಬಾಲಕಿ, ಕ್ಯಾಶ್ ಕೌಂಟರ್ ಹಿಂದೆ ಸೇರಿಕೊಂಡಿದ್ದಾಳೆ.

ಮಹಿಳೆಯೊಬ್ಬಳು ಆಕೆಗೆ ಅಡ್ಡಲಾಗಿ ನಿಂತಿದ್ದು, ಬಾಲಕಿ ಕ್ಯಾಶ್ ಡ್ರಾಯರ್ ತೆಗೆಯಲು ಯತ್ನಿಸಿದರೂ ಬೀಗ ಹಾಕಿದ್ದ ಕಾರಣ ಸಾಧ್ಯವಾಗಿಲ್ಲ. ಯಾವುದೇ ಅಳುಕಿಲ್ಲದೇ ಪಕ್ಕದಲ್ಲಿದ್ದ ಮತ್ತೊಂದು ಡ್ರಾಯರ್ ನಲ್ಲಿದ್ದ ಬೀಗ ತೆಗೆದುಕೊಂಡ ಬಾಲಕಿ ಕ್ಯಾಶ್ ಡ್ರಾಯರ್ ತೆಗೆದು ಅದರಲ್ಲಿದ್ದ ಹಣವನ್ನೆಲ್ಲಾ ತನ್ನ ಬ್ಯಾಗಿಗೆ ತುಂಬಿಕೊಂಡಿದ್ದಾಳೆ. ಬಳಿಕ ಎಲ್ಲರೂ ಅಲ್ಲಿಂದ ತೆರಳಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ರೆಸ್ಟೋರೆಂಟ್ ಮ್ಯಾನೇಜರ್ ಗೆ ಹಣ ಕಡಿಮೆಯಾಗಿರುವ ಗುಮಾನಿ ಬಂದಿದೆ. ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಬಾಲಕಿ ಸುಮಾರು 20 ಸಾವಿರ ರೂ. ಎಗರಿಸಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಬ್ಬರು ಮಹಿಳೆಯರು ಹಾಗೂ ಮಕ್ಕಳನ್ನು ವಶಕ್ಕೆ ಪಡೆದು 9 ಸಾವಿರ ರೂ. ಗಳನ್ನು ಜಫ್ತಿ ಮಾಡಲಾಗಿದೆ. ಮತ್ತೊಬ್ಬ ಮಹಿಳೆ ಪರಾರಿಯಾಗಿದ್ದಾಳೆ. ಈ ತಂಡ ಇನ್ನೂ ಮೂರ್ನಾಲ್ಕು ಕಡೆ ಇದೇ ರೀತಿ ಹಣ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...