alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಬೋಗಿಯಲ್ಲಿರಲಿದೆ ಕಾಫಿ ಮಶಿನ್, ಭದ್ರತೆಗಾಗಿ ಸಿಸಿ ಟಿವಿ

new-ac-iii-tier-coaches_02_11_2016

ಆಧುನೀಕರಣಗೊಳ್ಳುತ್ತಿರುವ ಭಾರತೀಯ ರೈಲ್ವೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. AC-III ಟಯರ್ ನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗಾಗಿ ಹೊಸ ಬೋಗಿಯನ್ನು ಸಿದ್ಧಪಡಿಸುತ್ತಿದೆ. ಇದರಲ್ಲಿ ಅತ್ಯಾಧುನೀಕ ಸೇವೆಗಳು ಲಭ್ಯವಾಗಲಿವೆ. ಭದ್ರತೆಗಾಗಿ ಸಿಸಿ ಟಿವಿ ಕ್ಯಾಮರಾ, ಟೀ ಮತ್ತು ಕಾಫಿ ಮಶಿನ್ ಹಾಗೂ ಜಿಪಿಎಸ್ ವ್ಯವಸ್ಥೆಯಿರಲಿದೆ.

ವರದಿಯೊಂದರ ಪ್ರಕಾರ, ನವೆಂಬರ್ ತಿಂಗಳ ಮಧ್ಯದೊಳಗೆ ಈ ಹೊಸ ಬೋಗಿ ಸಿದ್ಧವಾಗಲಿದೆಯಂತೆ. ಟೀ ಅಥವಾ ಕಾಫಿ ಕುಡಿಯಲು ಪ್ರಯಾಣಿಕರು ತೊಂದರೆ ಪಡುವಂತಿಲ್ಲ. ಪ್ರತಿಯೊಂದು ಬಾಗಿಲಿನ ಮೇಲೆ ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಲಭ್ಯವಾಗಲಿದೆ. ಇದರ ಜೊತೆಗೆ ಬೆಂಕಿ ಹಾಗೂ ಹೊಗೆಯನ್ನು ಪತ್ತೆ ಹಚ್ಚುವ ಯಂತ್ರ ಕೂಡ ಇರಲಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಾಯ್ಲೆಟ್ ಗೋಡೆಗೆ ಜೆಲ್ ಲೇಪನ ಇರಲಿದ್ದು, ಏನನ್ನೂ ಬರೆಯಲು ಸಾಧ್ಯವಿಲ್ಲ. ಈ ಸೌಲಭ್ಯವಿರುವ ರೈಲು ದೆಹಲಿ ಮತ್ತು ಗೋರಕ್ಪುರ ನಡುವೆ ಸಂಚರಿಸಲಿದೆ. ರಾಯ್ಬರೇಲಿಯ ರೈಲ್ವೆ ಕೋಚ್ ಕಾರ್ಖಾನೆಯಲ್ಲಿ ಈ ಬೋಗಿಯನ್ನು ಸಿದ್ಧಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...