alex Certify
ಕನ್ನಡ ದುನಿಯಾ       Mobile App
       

Kannada Duniya

8 ವರ್ಷದ ಬಾಲಕನಿಂದ 4 ಲಕ್ಷ ರೂ. ಚಿನ್ನಾಭರಣ ಅಪಹರಣ

download

ಆಶ್ಚರ್ಯ ಆದ್ರೂ ನಿಜ. ಕೇವಲ 8 ವರ್ಷದ ಬಾಲಕನೊಬ್ಬ ಸುಮಾರು 4 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾನೆ. ಬಾಲಕ ಕಳವು ಮಾಡುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಬಾಲಕನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಅಹ್ಮದಾಬಾದಿನ ಸರ್ದಾರ್ ಪಟೇಲ್ ರಿಂಗ್ ರೋಡ್ ಸಮೀಪವಿರುವ ಕಲ್ಯಾಣ ಮಂಟಪವೊಂದರಲ್ಲಿ ಈ ಘಟನೆ ನಡೆದಿದ್ದು, ಉದ್ಯಮಿ ಪಂಕಜ್ ಪಟೇಲ್ ಎಂಬವರ ಪುತ್ರನ ವಿವಾಹ ಆರತಕ್ಷತೆ ಕಾರ್ಯಕ್ರಮವನ್ನು ಇಲ್ಲಿ ಏರ್ಪಡಿಸಲಾಗಿತ್ತು.

ವಧು- ವರರಿಗೆ ಬಂದ ಚಿನ್ನಾಭರಣದ ಉಡುಗೊರೆಗಳನ್ನು ಒಂದು ಬ್ಯಾಗ್ ನಲ್ಲಿಡಲಾಗಿದ್ದು, ಆರತಕ್ಷತೆ ಸಮಾರಂಭದ ಬಳಿಕ ಈ ಬ್ಯಾಗ್ ಕಾಣೆಯಾಗಿರುವುದು ಬೆಳಕಿಗೆ ಬಂತು. ಆಗ ವಿಡಿಯೋ ಪರಿಶೀಲಿಸಲಾಗಿ ಬಾಲಕನೊಬ್ಬ ಈ ಬ್ಯಾಗ್ ಹೊತ್ತೊಯ್ದಿರುವುದು ಕಂಡು ಬಂದಿದೆ. ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ತಂಡವೊಂದು ಚಿಕ್ಕ ಬಾಲಕರಿಗೆ ತರಬೇತಿ ನೀಡಿ ಮದುವೆ ಮನೆಗಳಿಗೆ ಕಳುಹಿಸಿ ಈ ಕೃತ್ಯ ನಡೆಸುತ್ತಿದ್ದಾರೆಂದು ತಿಳಿಸಿರುವ ಪೊಲೀಸರು ಈ ತಂಡವನ್ನು ಶೀಘ್ರವೇ ಬಂಧಿಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...