alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಷಕರಿಗೆ ಸಿಹಿ ಸುದ್ದಿ: ಸದ್ಯದಲ್ಲೇ 8,000 ಹೊಸ ಸಿಬಿಎಸ್ಇ ಶಾಲೆ ಆರಂಭ

ಸದ್ಯದಲ್ಲಿಯೇ 8,000 ಹೊಸ ಸಿಬಿಎಸ್ಇ ಶಾಲೆಗಳು ಶುರುವಾಗುವ ಸಾಧ್ಯತೆ ಇದೆಯಂತೆ. ಈ ಕುರಿತು ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಮಂಜೂರು ಮಾಡಿದೆಯಂತೆ.

ಹಾಗೇ ಪರಿಷ್ಕೃತ ನಿಯಮಗಳ ಮೂಲಕ ಈ ಅನುಮತಿ ಪ್ರಕ್ರಿಯೆಯನ್ನು ಸರಳ ಹಾಗೂ ಕಾಗದರಹಿತಗೊಳಿಸಲಾಗಿದ್ದು, ಇನ್ನು ಈ ಹೊಸ ನಿಯಮದ ಪ್ರಕಾರ ಕೇವಲ ಎರಡು ದಾಖಲೆಯನ್ನು ಶಾಲೆಗಳು ನೀಡಿದರೆ ಸಾಕು. ಈ ಅರ್ಜಿಯನ್ನು ಅದೇ ವರ್ಷ ವಿಲೇವಾರಿ ಮಾಡುವ ನಿಯಮ ಕೂಡ ಜಾರಿಯಾದ ಕಾರಣ ಉಳಿದ ಅರ್ಜಿಗಳಿಗೆ ಮುಕ್ತಿ ಸಿಗಲಿದೆ.

ಪಾರದರ್ಶಕ ಹಾಗೂ ಕಿರಿಕಿರಿ ಮುಕ್ತ ಪ್ರಕ್ರಿಯೆಯ ಮೇಲೆ ಗಮನ ಹರಿಸಲಾಗುವುದು ಎಂದು ಸಚಿವ ಪ್ರಕಾಶ್ ಜಾವ್ಡೇಕರ್ ಪರಿಷ್ಕೃತ ನಿಯಮಗಳನ್ನು ಬಿಡುಗಡೆ ಮಾಡಿದ ಬಳಿಕ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...