alex Certify
ಕನ್ನಡ ದುನಿಯಾ       Mobile App
       

Kannada Duniya

“ಏ.30ರಂದು ನಡೆಯಲ್ಲ ಸಿಬಿಎಸ್ಸಿ 10ನೇ ತರಗತಿ ಗಣಿತ ಪರೀಕ್ಷೆ’’

ಸಿಬಿಎಸ್ಸಿಯ 10ನೇ ಮತ್ತು 12ನೇ ತರಗತಿ ಪ್ರಶ್ನೆ ಪತ್ರಿಕೆ ಲೀಕ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನಕಲಿ ವರದಿಗಳು ಪ್ರಸಾರವಾಗ್ತಿವೆ. ಸಿಬಿಎಸ್ಸಿ ನೊಟೀಸ್ ನಂತೆ ಕಾಣುವ ನಕಲಿ ನೊಟೀಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದ್ರಲ್ಲಿ ಸಿಬಿಎಸ್ಸಿ 10ನೇ ತರಗತಿ ಗಣಿತ ಪರೀಕ್ಷೆ ಏಪ್ರಿಲ್ 30ರಂದು ನಡೆಯಲಿದೆ ಎಂದು ಬರೆಯಲಾಗಿದೆ.

ತಪ್ಪು ಸಂದೇಶ ರವಾನೆಯಾಗ್ತಿರುವುದನ್ನು ಮನಗಂಡಿರುವ ಸಿಬಿಎಸ್ಸಿ ಈ ಬಗ್ಗೆ ನೊಟೀಸ್ ಜಾರಿ ಮಾಡಿದೆ. ಏಪ್ರಿಲ್ 30ರಂದು ಯಾವುದೇ ಗಣಿತ ಪರೀಕ್ಷೆ ನಡೆಯುತ್ತಿಲ್ಲವೆಂದು ಸ್ಪಷ್ಟನೆ ನೀಡಿದೆ. ನಕಲಿ ನೊಟೀಸ್ ನಲ್ಲಿ ಫೋಟೊ ಎಡಿಟರ್ ಬಳಸಲಾಗಿದೆ. ಇದು ಸುಳ್ಳು ಮಾಹಿತಿ. ಈ ಬಗ್ಗೆ ಮಕ್ಕಳು ತಲೆಕೆಡಿಸಿಕೊಳ್ಳಬೇಕಾಗಿಲ್ಲವೆಂದು ಬೋರ್ಡ್ ಹೇಳಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಮೇಲೆ ಸಿಬಿಎಸ್ಸಿ ಬೋರ್ಡ್ ಆಗಾಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೊಟೀಸ್ ಜಾರಿ ಮಾಡ್ತಿದೆ. ಸಂಸ್ಕೃತ, ಹಿಂದಿ,  ವಿಜ್ಞಾನದ ಪೇಪರ್ ಲೀಕ್ ಆಗಿಲ್ಲವೆಂದು ಎರಡು ದಿನಗಳ ಹಿಂದೆ ಸ್ಪಷ್ಟನೆ ನೀಡಿದೆ. ಸಿಬಿಎಸ್ಸಿ 12ನೇ ತರಗತಿ ಅರ್ಥಶಾಸ್ತ್ರ ಮರುಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 25ರಂದು ಪರೀಕ್ಷೆ ನಡೆಯಲಿದೆ. ಆದ್ರೆ ಗಣಿತ ಮರುಪರೀಕ್ಷೆ ದಿನಾಂಕ ನಿಗದಿಯಾಗಿಲ್ಲ. ಸಿಬಿಎಸ್ಸಿ ಅಧಿಕೃತ ನೊಟೀಸ್ ಜಾರಿ ಮಾಡುವವರೆಗೂ ಯಾವುದೇ ಸುಳ್ಳು ಸುದ್ದಿಯನ್ನು ಬಿತ್ತರಿಸಬೇಡಿ ಎಂದು ಬೋರ್ಡ್ ಮನವಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...