alex Certify
ಕನ್ನಡ ದುನಿಯಾ       Mobile App
       

Kannada Duniya

ಇಶ್ರತ್ ಜಹಾನ್ ಎನ್​ಕೌಂಟರ್ ಪ್ರಕರಣ: ಮೋದಿ ‘ಶಾ’ಕಿಂಗ್ ರಹಸ್ಯ…!!!

ಇಶ್ರತ್ ಜಹಾನ್ ಎನ್​ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಹೌದು…!  ಗುಜರಾತ್​ನಲ್ಲಿ ನಡೆದ ನಕಲಿ ಎನ್​ಕೌಂಟರ್ ಪ್ರಕರಣ ಕುರಿತು ಗುಜರಾತ್​ನ ಮಾಜಿ ಡಿಐಜಿ ಡಿಜಿ ವಂಜಾರಾ ಕುತೂಹಲಕಾರಿ ವಿಷಯವನ್ನ ಹೊರಹಾಕಿದ್ದಾರೆ.

ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗೂ ಗೃಹಮಂತ್ರಿಯಾಗಿದ್ದ ಅಮಿತ್ ಶಾರನ್ನು ಆಗಲೇ ಸಿಬಿಐ ಅಧಿಕಾರಿಗಳು ಬಂಧಿಸಬೇಕಿತ್ತು. ಆದರೆ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ ಎಂದು ವಂಜಾರಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ವಿ.ಡಿ. ಗಜ್ಜರ್ ಅಹ್ಮದಾಬಾದ್ ವಿಶೇಷ ನ್ಯಾಯಲಯದ ಮುಂದೆ ಪ್ರಸ್ತಾಪಿಸಿದ್ದಾರೆ.

ಕ್ಲೀನ್ ಚಿಟ್ ಪಡೆದ ಅಮಿತ್ ಶಾಗೆ ಮತ್ತೆ ಎದುರಾಗಲಿದ್ಯಾ ಸಂಕಷ್ಟ..?

2014ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ-ಆಧಾರದ ಕೊರತೆಯಿಂದ ಕ್ಲೀನ್ ಚಿಟ್ ನೀಡಿ ನಿರ್ದೋಷಿ ಎಂದು ಆದೇಶ ಹೊರಡಿಸಿತ್ತು. ಆದರೆ ಇವತ್ತಿನ ಈ ಹೇಳಿಕೆಯಿಂದ ಇಶ್ರತ್ ಜಹಾನ್ ಕೇಸ್ ಮರುಹುಟ್ಟು ಪಡೆಯಲಿದ್ಯಾ… ಅನ್ನೋದು ಮೋದಿ-ಶಾ ಅವರಿಗೆ ಆತಂಕ ಸೃಷ್ಟಿಸುವ ವಿಷಯವಾಗಿದೆ.

ಏನಿದು ಇಶ್ರತ್ ಜಹಾನ್ ಪ್ರಕರಣ…??

2004ರಲ್ಲಿ ಇಶ್ರತ್ ಜಹಾನ್ ಎಂಬ ಯುವತಿ ಸೇರಿದಂತೆ ಮೂವರನ್ನು ಫೇಕ್ ಎನ್​ಕೌಂಟರ್ ಹೆಸರಿನಡಿಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಒಂದು ವರದಿಯನ್ನು ಎಸ್.ಪಿ. ತಮಾಂಗ್ ಅವರ ನೇತೃತ್ವದಲ್ಲಿ ಗುಜರಾತ್ ಸರ್ಕಾರಕ್ಕೆ ನೀಡಿತ್ತು. ಆದರೆ ಅಂದಿನ ಗುಜರಾತ್ ಸರ್ಕಾರ ಇದನ್ನು ತಿರಸ್ಕರಿಸಿತ್ತು. ಇದೀಗ ಮಾಜಿ ಡಿಐಜಿ ವಂಜಾರಾ ಅವರ ಹೇಳಿಕೆಯಿಂದ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಗಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...