alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆಯ ತತ್ಕಾಲ್ ಟಿಕೆಟ್ ಹಗರಣದಲ್ಲಿ CBI ಟೆಕ್ಕಿ ಅರೆಸ್ಟ್

ತತ್ಕಾಲ್ ಟಿಕೆಟ್ ಹಗರಣವನ್ನು ಭೇದಿಸಿರುವ CBI ತನ್ನದೇ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಪ್ರೋಗ್ರಾಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಟೆಕ್ಕಿ ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಿದೆ.

ಅಜಯ್ ಗಾರ್ಗ್ ಬಂಧಿತ ಟೆಕ್ಕಿಯಾಗಿದ್ದು, ಈತ ತಾನು ತಯಾರಿಸಿದ ಸಾಫ್ಟ್ ವೇರ್ ನ್ನು ಟ್ರಾವೆಲ್ ಏಜೆಂಟ್ ಗಳಿಗೆ ಮಾರಾಟ ಮಾಡಿದ್ದು, ಇದರ ಮೂಲಕ ಅವರುಗಳು ಏಕಕಾಲಕ್ಕೆ ಸಹಸ್ರಾರು ಟಿಕೆಟ್ ಗಳನ್ನು ಬುಕ್ ಮಾಡಿ ನಂತರ ಅವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಪ್ರಯಾಣದ ಹಿಂದಿನ ದಿನ ತತ್ಕಾಲ್ ಟಿಕೆಟ್ ಗಳ ಮಾರಾಟ ಆರಂಭವಾಗುತ್ತಿದ್ದು, ಬೆಳಿಗ್ಗೆ 10 ಗಂಟೆಗೆ AC ದರ್ಜೆ ಹಾಗೂ 11 ಗಂಟೆಗೆ ನಾನ್ AC ದರ್ಜೆ ಆನ್ ಲೈನ್ ಬುಕಿಂಗ್ ಇದ್ದು, ನೈಜ ಪ್ರಯಾಣಿಕರಿಗೆ ಇವು ಲಭ್ಯವಾಗದೆ ಟ್ರಾವೆಲ್ ಏಜೆಂಟ್ ಗಳ ಪಾಲಾಗುತ್ತಿತ್ತು.

ಈ ಕುರಿತು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ನ ಭ್ರಷ್ಟಾಚಾರ ನಿಗ್ರಹ ದಳದ ಘಟಕ ಆರೋಪಿಗಳನ್ನು ಬಂಧಿಸಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...