alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ತಿ ಚಿದಂಬರಂಗೆ ಫುಲ್ ಡ್ರಿಲ್, ಇಂದ್ರಾಣಿಯೊಂದಿಗೆ ಮುಖಾಮುಖಿ

ನವದೆಹಲಿ: ಐ.ಎನ್.ಎಕ್ಸ್. ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತರಾಗಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ರನ್ನು ಮುಂಬೈಗೆ ಕರೆತರಲಾಗಿದೆ.

ಪುತ್ರಿಯ ಕೊಲೆ ಪ್ರಕರಣದಲ್ಲಿ ಮುಂಬೈ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಅವರೊಂದಿಗೆ ಕಾರ್ತಿ ಚಿದಂಬರಂ ಮುಖಾಮುಖಿಯಾಗಲಿದ್ದಾರೆ. ಫೆಬ್ರವರಿ  28 ರಂದು ಕಾರ್ತಿ ಚಿದಂಬರಂ ಅವರನ್ನು ಚೆನ್ನೈನಲ್ಲಿ ಬಂಧಿಸಿದ್ದ ಸಿ.ಬಿ.ಐ., ಮಾರ್ಚ್ 1 ರಂದು ಕೋರ್ಟ್ ಗೆ ಹಾಜರುಪಡಿಸಿದ್ದು, ವಿಚಾರಣೆಗಾಗಿ 5 ದಿನಗಳ ಕಾಲ ವಶಕ್ಕೆ ಪಡೆದಿದೆ.

ಕಾರ್ತಿ ಚಿದಂಬರಂಗೆ ಫುಲ್ ಡ್ರಿಲ್ ಮಾಡಿಸಿರುವ ಸಿ.ಬಿ.ಐ. ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ಕರೆತಂದಿದ್ದಾರೆ. ಐ.ಎನ್.ಎಕ್ಸ್. ಮೀಡಿಯಾದಿಂದ 9 ಎಕ್ಸ್ ಮೀಡಿಯಾಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಅಲ್ಲದೇ, ದೆಹಲಿಯ ಹೋಟೆಲ್ ನಲ್ಲಿ ಕಾರ್ತಿ ಅವರನ್ನು ಭೇಟಿಯಾಗಿದ್ದಾಗಿ ಹಿಂದೆ ಇಂದ್ರಾಣಿ ಮುಖರ್ಜಿ ಮಾಹಿತಿ ನೀಡಿದ್ದರು.

ಇದರ ಆಧಾರದ ಮೇಲೆ ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕಾರ್ತಿ ಅವರನ್ನು ಕರೆತರಲಾಗಿದೆ. ವಿಚಾರಣೆಯ ಭಾಗವಾಗಿ ಕಾರ್ತಿ ಹಾಗೂ ಇಂದ್ರಾಣಿ ಮುಖರ್ಜಿ ಮುಖಾಮುಖಿಯಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...