alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರದ್ಯುಮನ್ ಪ್ರಕರಣ: ಆರೋಪಿ ವಿದ್ಯಾರ್ಥಿಯ ಯೂ ಟರ್ನ್

ಗುರ್ಗಾಂವ್ ರಯಾನ್ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ನಡೆದ ಪ್ರದ್ಯುಮನ್ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಕ್ತಿದೆ. ಈ ಹಿಂದೆ ಶಾಲೆ ವಾಹನದ ಕಂಡಕ್ಟರ್ ಹತ್ಯೆ ಮಾಡಿದ್ದಾನೆಂದು ಗುರ್ಗಾಂವ್ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆದ್ರೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸಿಬಿಐ ಕಂಡಕ್ಟರ್ ನಿರಪರಾಧಿ ಎಂದಿತ್ತು.

ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದ ಸಿಬಿಐ ಅದೇ ಶಾಲೆಯಲ್ಲಿ ಓದುತ್ತಿರುವ 11ನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿದೆ. ಆತ ತಪ್ಪೊಪ್ಪಿಕೊಂಡಿದ್ದಾನೆಂದೂ ಸಿಬಿಐ ಹೇಳಿದೆ. ಆದ್ರೆ ಸೋಮವಾರ ಆರೋಪಿ ವಿದ್ಯಾರ್ಥಿ, ಸಿಬಿಐ ಮೇಲೆ ದೊಡ್ಡ ಆರೋಪ ಹೊರಿಸಿದ್ದಾನೆ. ತಪ್ಪೊಪ್ಪಿಕೊಳ್ಳದಿದ್ದಲ್ಲಿ ಸಹೋದರನ ಕೊಲೆ ಮಾಡುವುದಾಗಿ ಸಿಬಿಐ ಅಧಿಕಾರಿಗಳು ಬೆದರಿಸಿದ್ದರು. ಹಾಗಾಗಿ ತಪ್ಪೊಪ್ಪಿಕೊಂಡೆ ಎಂದಿದ್ದಾನೆ.

ಸೋಮವಾರ ಆರೋಪಿ ವಿದ್ಯಾರ್ಥಿಯನ್ನು ಜುವೆನೈಲ್ ಹೋಮ್ ಮುಂದೆ ಹಾಜರುಪಡಿಸಲಾಗಿತ್ತು. ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿ ಕೌನ್ಸಿಲಿಂಗ್ ನಡೆದಿದೆ. ಈ ವೇಳೆ ವಿದ್ಯಾರ್ಥಿ ಸಿಬಿಐ ವಿರುದ್ಧ ದೂರು ಹೇಳಿದ್ದಾನೆ ಎನ್ನಲಾಗಿದೆ. ಸಿಬಿಐ ಅಧಿಕಾರಿಗಳು ಬೆದರಿಸಿದ್ದಾರೆ. ಸಹೋದರನ ಹತ್ಯೆ ಮಾಡುವುದಾಗಿ ಹೇಳಿದ್ದಾರೆ. ಈ ಭಯಕ್ಕೆ ತಪ್ಪೊಪ್ಪಿಕೊಂಡೆ. ನಾನು ಪ್ರದ್ಯುಮನ್ ಹತ್ಯೆ ಮಾಡಿಲ್ಲ ಎಂದಿದ್ದಾನೆ. ಇದೇ ವೇಳೆ ವಿದ್ಯಾರ್ಥಿ ಸಿಬಿಐ ಅಧಿಕಾರಿಗಳ ಸಮಕ್ಷಮದಲ್ಲಿ ತಂದೆ-ತಾಯಿ ಹಾಗೂ ಸಹೋದರನ ಭೇಟಿ ಮಾಡಿ ಅವ್ರ ಮುಂದೆ ಕಣ್ಣೀರಿಟ್ಟಿದ್ದಾನೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...