alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪು ತನಿಖಾ ವರದಿ ನೀಡಿದ್ದಕ್ಕೆ ಸಿಬಿಐ ನಿರ್ದೇಶಕರಿಗೆ ದಂಡ

ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ,ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರಿಗೆ 15 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣವೊಂದರ ಬಗ್ಗೆ ತಪ್ಪು ತನಿಖಾ ವರದಿ ನೀಡಿದ ಆರೋಪದ ಮೇಲೆ ರಾಜ್ಯ ಮಾನವ ಹಕ್ಕುಗಳ ಆಯೋಗ ದಂಡ ವಿಧಿಸಿದೆ.

ಎಂ ಎಸ್ ಹೆಚ್ ಆರ್ ಸಿ ನಿರ್ದೇಶನದ ಮೇರೆಗೆ ಸಿಬಿಐ ನಿರ್ದೇಶಕರು ಪೀಡಿತರ ಪಕ್ಷಕ್ಕೆ 15 ಲಕ್ಷ ರೂಪಾಯಿ ನೀಡಬೇಕಾಗಿದೆ. ಎಂಬಿಎ ವಿದ್ಯಾರ್ಥಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತಪ್ಪು ತನಿಖಾ ವರದಿ ನೀಡಿದ್ದರು. ಮೃತ ವಿದ್ಯಾರ್ಥಿ ತಂದೆ ಕಳೆದ 7 ವರ್ಷಗಳಿಂದ ನ್ಯಾಯಕ್ಕಾಗಿ ಅಲೆಯುತ್ತಿದ್ದಾರಂತೆ.

ಜುಲೈ 15,2011 ರಂದು ವಿದ್ಯಾರ್ಥಿ ಸಾವನ್ನಪ್ಪಿದ್ದ. ಅಲ್ಲಿಂದ ಇಲ್ಲಿಯವರೆಗೂ ತನಿಖೆ ನಡೆಯುತ್ತಲೇ ಇದೆ. ಯಾವುದೇ ಸ್ಪಷ್ಟ ಮಾಹಿತಿ ಹೊರ ಬಿದ್ದಿಲ್ಲ. ಆರು ವಾರಗಳಲ್ಲಿ ತನಿಖಾ ವರದಿ ನೀಡಬೇಕು. ಹಾಗೆ ತಪ್ಪು ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಯಬೇಕೆಂದು ಸೂಚನೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...