alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕಾಪಡೆ ರಹಸ್ಯ ಸೋರಿಕೆ ಮಾಡಿದ್ದ ನಿವೃತ್ತ ಕ್ಯಾಪ್ಟನ್ ಗೆ ಜೈಲು

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ನಿವೃತ್ತ ಕ್ಯಾಪ್ಟನ್ ಸಲಾಂ ಸಿಂಗ್ ರಾಥೋಡ್ ಎಂಬವರಿಗೆ ದೆಹಲಿ ನ್ಯಾಯಾಲಯ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2006ರಲ್ಲಿ ನೌಕಾಪಡೆಯ ರಹಸ್ಯವನ್ನು ಕ್ಯಾಪ್ಟನ್ ಸಲಾಂ ಸಿಂಗ್ ರಾಥೋಡ್ ಸೋರಿಕೆ ಮಾಡಿದ್ದರೆಂದು ಆರೋಪ ಹೊರಿಸಲಾಗಿತ್ತು. ಈಗ ಪ್ರಕರಣದ ತೀರ್ಪು ಹೊರ ಬಿದ್ದಿದೆ.

ರಕ್ಷಣಾ ಅಧಿಕಾರಿಯಾಗಿ ದೇಶದ ಏಕತೆ ಹಾಗೂ ಭದ್ರತೆಗೆ ಕಾರ್ಯ ನಿರ್ವಹಿಸಬೇಕಾದ ನೀವು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ ಎಂದು ಹೇಳಿದ ಸಿಬಿಐ ವಿಶೇಷ ನ್ಯಾಯಾಧೀಶ ಅಗರ್ವಾಲ್, ನಿವೃತ್ತ ಕ್ಯಾಪ್ಟನ್ ಸಲಾಂ ಸಿಂಗ್ ರಾಥೋಡ್ ಅವರಿಗೆ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...