alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಲಿಫೋನ್ ಎಕ್ಸ್ ಚೇಂಜ್ ಹಗರಣ: ಮಾರನ್ ಸಹೋದರರಿಗೆ ಕ್ಲೀನ್ ಚಿಟ್

ಟೆಲಿಫೋನ್ ಎಕ್ಸ್ ಚೇಂಜ್ ಹಗರಣದಲ್ಲಿ ಸಿಲುಕಿದ್ದ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಕಲಾನಿಧಿ ಮಾರನ್ ರನ್ನು ಸಿಬಿಐ ವಿಶೇಷ ಕೋರ್ಟ್ ದೋಷಮುಕ್ತಗೊಳಿಸಿದೆ. ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಅಪರಾಧ ಸಾಬೀತಾಗುವಂತಹ ಯಾವುದೇ ಸಾಕ್ಷ್ಯಗಳೂ ಇಲ್ಲದ ಕಾರಣ ಕ್ಲೀನ್ ಚಿಟ್ ನೀಡಲಾಗಿದೆ.

ಸಿಬಿಐ ವಿಶೇಷ ಕೋರ್ಟ್ ನ ನ್ಯಾಯಮೂರ್ತಿ ನಟರಾಜನ್ ಪ್ರಕರಣದ ಎಲ್ಲಾ ಆರೋಪಿಗಳೂ ದೋಷಮುಕ್ತರೆಂದು ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ತಮ್ಮನ್ನು ದೋಷಮುಕ್ತಗೊಳಿಸಬೇಕೆಂದು ದಯಾನಿಧಿ ಮಾರನ್ ಹಾಗೂ ಕಲಾನಿಧಿ ಮಾರನ್ ಮನವಿ ಮಾಡಿಕೊಂಡಿದ್ದರು.

ಇದಕ್ಕೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಸನ್ ಟಿವಿ ಡೇಟಾಗೆ ಅಕ್ರಮವಾಗಿ ಅಪ್ ಲಿಂಕ್ ಕಲ್ಪಿಸಲು 700ಕ್ಕೂ ಹೆಚ್ಚು ಟೆಲಿಫೋನ್ ಲೈನ್ ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇವರ ಮೇಲಿತ್ತು. ಇದರಿಂದಾಗಿ ಸರ್ಕಾರದ ಬಿಎಸ್ಎನ್ಎಲ್ ಸಂಸ್ಥೆಗೆ 1.78 ಕೋಟಿ ರೂಪಾಯಿ ನಷ್ಟವಾಗಿದೆ ಅಂತಾ ಹೇಳಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...