alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಚೈಲ್ಡ್ ಪೋರ್ನ್ ದಂಧೆ : ಅಂತರಾಷ್ಟ್ರೀಯ ಜಾಲ ಭೇದಿಸಿದೆ ಸಿಬಿಐ

ವಾಟ್ಸಾಪ್ ಮೂಲಕ ಚೈಲ್ಡ್ ಪೋರ್ನ್ ದಂಧೆ ನಡೆಸ್ತಾ ಇದ್ದ ಬೃಹತ್ ಜಾಲವೊಂದನ್ನು ಸಿಬಿಐ ಪತ್ತೆ ಮಾಡಿದೆ. ಭಾರತ ಮಾತ್ರವಲ್ಲ  ವಿದೇಶಕ್ಕೂ ಈ ದಂಧೆಯ ಜಾಲ ಹರಡಿತ್ತು. ಒಟ್ಟು 118 ಮಂದಿ ಈ ವಾಟ್ಸಾಪ್ ಗ್ರೂಪ್ ನ ಸದಸ್ಯರಾಗಿದ್ರು.

ಗ್ರೂಪ್ ಅಡ್ಮಿನ್ ಗಳಾದ ಐವರನ್ನು ಸಿಬಿಐ ಬಂಧಿಸಿದೆ. 20 ವರ್ಷದ ನಿಖಿಲ್ ವರ್ಮಾ ಈ ದಂಧೆಯ ಕಿಂಗ್ ಪಿನ್. ವಾಣಿಜ್ಯ ಪದವೀಧರನಾಗಿರೋ ಈತ ನಿರುದ್ಯೋಗಿಯಾಗಿದ್ದ. ಉತ್ತರಪ್ರದೇಶದ ಕನೌಜ್ ಮೂಲದವನು.

ಸತ್ಯೇಂದ್ರ ಚೌಹಾಣ್, ಆದರ್ಶ್, ನಫೀಸ್ ರಾಜಾ ಹಾಗೂ ಜಾಹಿದ್ ಉಳಿದ ಆರೋಪಿಗಳು. ದೆಹಲಿ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಸಿಬಿಐ, ಚೈಲ್ಡ್ ಪೋರ್ನ್ ದಂಧೆಗೆ ಬಳಸಿದ್ದ ಕಂಪ್ಯೂಟರ್, ಹಾರ್ಡ್ ಡಿಸ್ಕ್, ಮೊಬೈಲ್ ಗಳನ್ನು ವಶಪಡಿಸಿಕೊಂಡಿದೆ.

ಅಶ್ಲೀಲ ದೃಶ್ಯಗಳ ರವಾನೆಯಾಗ್ತಿದ್ದ ಈ ವಾಟ್ಸಾಪ್ ಗ್ರೂಪ್ ನಲ್ಲಿ ಅಮೆರಿಕ, ಶ್ರೀಲಂಕಾ, ಚೀನಾ, ಪಾಕಿಸ್ತಾನ, ಬ್ರೆಜಿಲ್, ಅಫ್ಘಾನಿಸ್ತಾನ, ಕೀನ್ಯಾ, ನೈಜೀರಿಯಾ, ಮೆಕ್ಸಿಕೋ ಮತ್ತು ನ್ಯೂಜಿಲೆಂಡ್ ನಿವಾಸಿಗಳು ಕೂಡ ಸದಸ್ಯರಾಗಿದ್ದರು. ಅವರನ್ನೆಲ್ಲ ಪತ್ತೆ ಮಾಡಲು ಸಿಬಿಐ ಆಯಾ ದೇಶಗಳ ಸಹಕಾರ ಕೇಳಿದೆ. ಸತತ ಮೂರು ತಿಂಗಳ ತನಿಖೆಯ ಬಳಿಕ ಈ ಜಾಲವನ್ನು ಭೇದಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...