alex Certify
ಕನ್ನಡ ದುನಿಯಾ       Mobile App
       

Kannada Duniya

ಕಾವೇರಿ ನದಿ ನೀರು ವಿವಾದ : ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರದಿಂದ “ಶಾಕ್”

ಕಾವೇರಿ ನದಿ ನೀರು ವಿವಾದದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಜನತೆಗೆ ದೊಡ್ಡ ಶಾಕ್ ನೀಡಿದೆ. ಕರ್ನಾಟಕದ ವಿರೋಧದ ನಡುವೆಯೂ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷರಾಗಿ ಸಿಡಬ್ಲ್ಯುಸಿ ಇಂಜಿನಿಯರ್ ನವೀನ್ ಕುಮಾರ್ ಅವರನ್ನು ನೇಮಿಸಲಾಗಿದ್ದು, ಸದಸ್ಯರಾಗಿ ಕೇರಳದಿಂದ ಕೆ.ಎ. ಜೋಷಿ, ಪುದುಚೇರಿಯಿಂದ ಷಣ್ಮುಗ ಸುಂದರಂ ಹಾಗೂ ತಮಿಳುನಾಡಿನಿಂದ ಸೆಂಥಿಲ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ನೀರು ನಿರ್ವಹಣಾ ಸಮಿತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಕರ್ನಾಟಕ, ತನ್ನ ಸದಸ್ಯರ ಹೆಸರನ್ನು ಶಿಫಾರಸ್ಸು ಮಾಡದ ಕಾರಣ ಇದನ್ನು ಹೊರತುಪಡಿಸಿ ಉಳಿದವರನ್ನು ನೇಮಕ ಮಾಡಲಾಗಿದ್ದು, ಈ ಸಮಿತಿಯ ಕಚೇರಿ ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...