alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಹಾಡಹಗಲೇ ನಡೆದ ಭಯಾನಕ ಕೃತ್ಯ

ದೆಹಲಿಯ ಖಾನ್ಪುರ ಎಂಬಲ್ಲಿ ದುಷ್ಕರ್ಮಿಗಳ ಗುಂಪೊಂದು 50 ಬಾರಿ ಯುವಕನಿಗೆ ಚಾಕುವಿನಿಂದ ಇರಿದಿದೆ. ಕಬ್ಬಿಣದ ರಾಡ್ ನಿಂದ ಮನಬಂದಂತೆ ಥಳಿಸಿದೆ. ಈ ಘೋರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ನಿನ್ನೆ ಸಂಜೆ 4 ಗಂಟೆ ವೇಳೆಗೆ ಆಶೀಶ್ ಎಂಬ ಯುವಕ ಜಿಮ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ. ಬೈಕ್ ನಲ್ಲಿ ಬಂದ ಸುಮಾರು 20 ಜನರ ಗುಂಪು ಅವನನ್ನು ಅಡ್ಡಗಟ್ಟಿದೆ. ಒಟ್ಟು 10 ಮೋಟಾರ್ ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು ಅವನ ಮೇಲೆ ಹಲ್ಲೆ ಮಾಡಿದ್ದಾರೆ.

ಚಾಕುವಿನಿಂದ ಸುಮಾರು 50 ಬಾರಿ ತಿವಿದಿದ್ದಾರೆ, ರಾಡ್ ನಿಂದಲೂ ಥಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಭೀಕರ ದೃಶ್ಯವನ್ನು ಜನರು ನೋಡುತ್ತ ನಿಂತಿದ್ದರೇ ಹೊರತೂ ದುಷ್ಕರ್ಮಿಗಳನ್ನು ತಡೆಯಲು ಯಾರೂ ಮುಂದಾಗಿಲ್ಲ. ಇದು ಹೋಳಿ ಆಚರಣೆಗೆ ಸಂಬಂಧಿಸಿದ ಘರ್ಷಣೆ ಎನ್ನಲಾಗಿದೆ.

ದುಷ್ಕರ್ಮಿಗಳು ವಾಟರ್ ಬಲೂನ್ ಎಸೆದಿದ್ದಕ್ಕೆ ಆಶೀಶ್ ಆಕ್ಷೇಪಿಸಿದ್ದ. ಇದೇ ಕೋಪದಲ್ಲಿ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಆಶೀಶ್ ದೇಹದ ಮೇಲೆ 50ಕ್ಕೂ ಹೆಚ್ಚು ಚಾಕು ಇರಿತದ ಗಾಯಗಳಾಗಿವೆ ಅಂತಾ ವೈದ್ಯರು ತಿಳಿಸಿದ್ದಾರೆ. ಸದ್ಯ ಐಸಿಯುನಲ್ಲಿರೋ ಆಶೀಶ್ ಸ್ಥಿತಿ ಚಿಂತಾಜನಕವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...