alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ತವ್ಯನಿರತ ಪೇದೆಗೆ ಐಪಿಎಸ್ ಅಧಿಕಾರಿ ಪುತ್ರಿಯ ಆವಾಜ್

ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರು ತನ್ನ ಸ್ನೇಹಿತೆಯರೊಂದಿಗೆ ತೆರಳುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿಯ ಕಾರನ್ನು ತಪಾಸಣೆಗೆಂದು ತಡೆದು ನಿಲ್ಲಿಸಿದ್ದು, ಇದರಿಂದ ಕೆರಳಿದ ಯುವತಿ, ತಂದೆಗೆ ಹೇಳಿ ಕೆಲಸದಿಂದ ವಜಾ ಮಾಡಿಸುವುದಾಗಿ ಆವಾಜ್ ಹಾಕಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಈ ಪೊಲೀಸ್ ಪೇದೆ ಮದ್ಯಪಾನ ಮಾಡಿಕೊಂಡು ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಲು ತಪಾಸಣೆ ನಡೆಸುತ್ತಿದ್ದು, ಅದರಂತೆ ಐಪಿಎಸ್ ಅಧಿಕಾರಿಯ ಪುತ್ರಿಯಿದ್ದ ಕಾರನ್ನೂ ನಿಲ್ಲಿಸಿದ್ದಾರೆ. ಕಾರಿನೊಳಗೆ ಮದ್ಯದ ಬಾಟಲಿಗಳೂ ಇದ್ದವೆನ್ನಲಾಗಿದ್ದು, ಪರೀಕ್ಷೆಗೊಳಪಡಲು ಕಾರಿನಿಂದ ಇಳಿದು ಬರುವಂತೆ ಸೂಚಿಸಿದ್ದಾರೆ.

ಆದರೆ ಇದಕ್ಕೆ ಜಗ್ಗದ ಐಪಿಎಸ್ ಅಧಿಕಾರಿಯ ಪುತ್ರಿ ಪೊಲೀಸ್ ಪೇದೆಗೆ ನಿನ್ನ ಹೆಸರೇನು, ಎಲ್ಲಿ ಕೆಲಸ ಮಾಡುತ್ತಿದ್ದೀಯಾ. ನನ್ನ ತಂದೆಗೆ ಹೇಳಿ ನಿನ್ನ ಕೆಲಸವನ್ನೇ ಇಲ್ಲವಾಗುವಂತೆ ಮಾಡುತ್ತೇನೆ ಎಂದಿದ್ದಾಳೆ. ಪೊಲೀಸ್ ಪೇದೆ ಈ ಎಲ್ಲ ಘಟನಾವಳಿಗಳನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಐಪಿಎಸ್ ಆಧಿಕಾರಿಯ ಪುತ್ರಿಯ ನಡವಳಿಕೆಗೆ ಆಕ್ರೋಶ ವ್ಯಕ್ತವಾಗಿದೆಯಲ್ಲದೇ ಆಕೆಯ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...