alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟಿಗಾಗಿ ಪರದಾಡಿದ ಜನರ ಬಗ್ಗೆ ಬಿಜೆಪಿ ಮುಖಂಡನ ವ್ಯಂಗ್ಯ

manoj-tiwari-759

ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ, ನೋಟು ನಿಷೇಧದ ಬಳಿಕ ಎಟಿಎಂ ಹಾಗೂ ಬ್ಯಾಂಕ್ ಎದುರು ಕ್ಯೂನಲ್ಲಿ ನಿಂತು ಪಡಿಪಾಟಲು ಪಟ್ಟ ಜನಸಾಮಾನ್ಯರ ಬಗ್ಗೆ ಕುಹಕವಾಡಿದ್ದಾರೆ. ಮನೋಜ್ ತಿವಾರಿ ಅವರ ಮಾತುಗಳು ಕ್ಯಾಮರಾದಲ್ಲಿ ಸೆರೆಸಿಕ್ಕಿವೆ.

ಶಾಸಕ ವಿಜೇಂದರ್ ಗುಪ್ತಾ ಹೊಸ ವರ್ಷದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ನೋಟು ನಿಷೇಧದ ಬಗ್ಗೆ ಪ್ರಸ್ತಾಪವಾದಾಗ ಹಾಡಿನ ಮೂಲಕ ಮನೋಜ್ ತಿವಾರಿ ಜನಸಾಮಾನ್ಯರಿಗೆ ಅವಮಾನ ಮಾಡಿದ್ದಾರೆ.

ಮನೋಜ್ ತಿವಾರಿ ಕೂಡ ಹಣ ಡ್ರಾ ಮಾಡಲು ಎಟಿಎಂ ಬಳಿ ತೆರಳಿದ್ರು. ಈ ವೇಳೆ ಮಾಧ್ಯಮದವರು ಅವರ ಬಳಿ ನೋಟು ನಿಷೇಧದ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತಾ ಕೇಳಿದ್ದಾರೆ. ಅದನ್ನು ಮನೋಜ್ ತಿವಾರಿ ಹಾಡಿನ ಮೂಲಕವೇ ಬಣ್ಣಿಸಿದರಂತೆ. ಅಲ್ಲಿ ಹೇಳಿದ ಹಾಡನ್ನೇ ಹೊಸ ವರ್ಷದ ಪಾರ್ಟಿಯಲ್ಲೂ ಮನೋಜ್ ತಿವಾರಿ ಹಾಡಿದ್ರು. ಕ್ಯೂನಲ್ಲಿ ನಿಂತ ಜನರ ಬಗ್ಗೆ ವ್ಯಂಗ್ಯವಾಡುವಂತಿದ್ದ ಹಾಡನ್ನು ಕೇಳಿ ಜೊತೆಗಿದ್ದವರೆಲ್ಲ ನಕ್ಕಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...