alex Certify
ಕನ್ನಡ ದುನಿಯಾ       Mobile App
       

Kannada Duniya

11 ಈರುಳ್ಳಿಯನ್ನು ಹೊರ ಹಾಕಿದ ಹಾವು…!

ಕೆಲ ತಿಂಗಳ ಹಿಂದಷ್ಟೇ ಕೇರಳದಲ್ಲಿ ಹಾವೊಂದು ಮೊಟ್ಟೆಗಳನ್ನು ಹೊರ ಹಾಕಿದ್ದ ವರದಿಯನ್ನು ಓದಿದ್ದೀರಿ. ಈಗ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು, ಈ ಪ್ರಕರಣದಲ್ಲಿ ಹಾವು ಈರುಳ್ಳಿಯನ್ನು ಹೊರ ಹಾಕಿದೆ.

ಇಂತಹದೊಂದು ಘಟನೆ ಓಡಿಶಾದಲ್ಲಿ ನಡೆದಿದೆ. ಅಂಗುಲ್ ಜಿಲ್ಲೆಯ ಚೆಂದಿಪಾಡ್ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಗ್ರಾಮದಲ್ಲಿ ಒಬ್ಬರ ಮನೆಯಲ್ಲಿ ಈ ಹಾವು ಕಾಣಿಸಿಕೊಂಡಿದೆ.

ಇದನ್ನು ನೋಡುತ್ತಿದ್ದಂತೆ, ಮನೆಯ ನಿವಾಸಿ ಹಾವು ಹಿಡಿಯುವರಿಗೆ ಕಾಲ್ ಮಾಡಿದ್ದಾರೆ. ಕೆಲ ಹೊತ್ತಿನಲ್ಲಿ ಹಾವು ಹಿಡಿಯುವರು ಅಲ್ಲಿ ಬಂದು ಅದನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಆಗ ಅದರ ಬಾಯಿಯಿಂದ ಈರುಳ್ಳಿ ಹೊರ ಬಂದಿದೆ. ಇದನ್ನು ನೋಡಿದವರು ಅಚ್ಚರಿಗೊಂಡಿದ್ದಾರೆ. ಅಲ್ಲದೆ ಹಾವು ಈರುಳ್ಳಿ ಹೊರ ಹಾಕುತ್ತಿರುವ ಫೋಟೋ ತೆಗೆದಿದ್ದಾರೆ.

ನಂತರ ಪ್ರತ್ಯಕ್ಷದರ್ಶಿಗಳು ಹಾವಿನ ಬಾಯಿಯಿಂದ ಬರುತ್ತಿದ್ದ, ಈರುಳ್ಳಿಯ ವಿಡಿಯೋ ಸಹ ಮಾಡಿದ್ದಾರೆ. ಈ ಹಾವು ತಾನು ನುಂಗಿದ್ದ 11 ಈರುಳ್ಳಿಯನ್ನು ಹೊರ ಹಾಕಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...