alex Certify
ಕನ್ನಡ ದುನಿಯಾ       Mobile App
       

Kannada Duniya

ಸಂತಾಪ ಸೂಚಕ ಸಭೆಯಲ್ಲಿ ಸಚಿವರ ನಗು…!

ರಾಯ್ಪುರ: ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂತಾಪ ಸೂಚಕ ಸಭೆಯ ವೇದಿಕೆಯಲ್ಲಿ ಕುಳಿತಿದ್ದ ಇಬ್ಬರು ಸಚಿವರು
ನಗುತ್ತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಛತ್ತೀಸ್ ಘಡ ಸರ್ಕಾರದ ಸಚಿವ ಬ್ರಿಜ್ಮೋಹನ್ ಅಗರ್ವಾಲ್ ಹಾಗೂ ಆರೋಗ್ಯ ಸಚಿವ ಅಜಯ್ ಚಂದ್ರಕರ್ ಅವರು ಸಂತಾಪ ಸಭೆಯಲ್ಲಿ ಹರಟುತ್ತಾ ಕುಳಿತು ನಗೆಯಾಡಿರುವ ವಿಡಿಯೋ ಹರಿದಾಡಿದ್ದು, ಕಾಂಗ್ರೆಸ್ ಟೀಕೆಗೂ ಆಹಾರವಾಗಿದೆ.

ಬುಧವಾರ ಅಟಲ್ ಚಿತಾಭಸ್ಮ ವಿಸರ್ಜಿಸುವ ಕಾರ್ಯಕ್ರಮಕ್ಕೆ ಮುನ್ನ ರಾಯ್ಪುರದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ವೇದಿಕೆಯಲ್ಲಿ ಈ ಇಬ್ಬರ ಮಾತು-ನಗುವನ್ನು ಕಂಡ ಅಲ್ಲಿನ ಪಕ್ಷದ ಅಧ್ಯಕ್ಷ ಧರಂ ಲಾಲ್ ಕೌಶಿಕ್ ಮೌನವಾಗಿರುವಂತೆ ಕೈಸನ್ನೆ ಮಾಡಿ ಸೂಚಿಸುವುದೂ ಸಹ ವಿಡಿಯೋದಲ್ಲಿ ಕಾಣಿಸುತ್ತದೆ. ಈ ಸಭೆಯಲ್ಲಿ ಅಲ್ಲಿನ ಸಿಎಂ ರಮಣ್ ಸಿಂಗ್ ಸಹ ಉಪಸ್ಥಿತರಿದ್ದರು.

ಈ ಘಟನೆ ಬಗ್ಗೆ ಟೀಕೆ ಮಾಡಿರುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶೈಲೇಶ್ ನಿತಿನ್ ತ್ರಿವೇದಿ, ಅಟಲ್ ಜೀಯವರನ್ನು ಪಕ್ಷದ ನಾಯಕತ್ವ ಕಡೆಗಣಿಸಿತು. ಬಿಜೆಪಿಯ ಹಿರಿಯ ಸಚಿವರು ತಮ್ಮ ನಾಯಕನಿಗೆ ಯಾವ ರೀತಿ ಗೌರವ ತೋರಿಸಿದ್ದಾರೆಂಬುದು ಈಗ ಗೊತ್ತಾಗಿದೆ ಎಂದು ಲೇವಡಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...