alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯನ್ನು ಎತ್ತಿ ಒಗೆಯಿತು ಮದವೇರಿದ ಎತ್ತು

bull

ಈ ದೃಶ್ಯ ನೋಡಿದ್ರೆ ಎಂಥ ಗಟ್ಟಿ ಗುಂಡಿಗೆಯವರೂ ಬೆಚ್ಚಿ ಬೀಳ್ತಾರೆ. ಮಧ್ಯಪ್ರದೇಶದ ಹೋಷಂಗಾಬಾದ್ ಜಿಲ್ಲೆಯಲ್ಲಿ ನಡೆದ ಘಟನೆ ಇದು. ಜಗ್ದಿಶ್ ಪುರ ಬಳಿಯಿರುವ ಸೇಥಾನಿ ಘಾಟ್ ನಲ್ಲಿ ಕೊಬ್ಬಿದ ಎತ್ತು ಮಹಿಳೆಯೊಬ್ಬರ ಮೇಲೆ ಎರಗಿದೆ.

ಆ ಮಹಿಳೆ ರಸ್ತೆಯಲ್ಲಿ ನಿಧಾನವಾಗಿ ನಡೆದುಕೊಂಡು ಬರುತ್ತಿದ್ರು. ಅದೆಲ್ಲಿಂದ್ಲೋ ರಭಸವಾಗಿ ಬಂದ ಮದವೇರಿದ ಎತ್ತು ಮಹಿಳೆಯನ್ನು ತನ್ನ ಕೋಡಿನಿಂದ ಎತ್ತಿ ನೆಲಕ್ಕೆ ಕುಕ್ಕಿದೆ. ಗೊಂಬೆಯನ್ನು ಮೇಲೆತ್ತಿ ಬಿಸಾಡಿದಂತೆ ಮಹಿಳೆಯನ್ನು ನೆಲಕ್ಕೆ ಹಾಕಿದೆ.

ಬಂದಷ್ಟೇ ವೇಗದಲ್ಲಿ ಅಲ್ಲಿಂದ ಹೊರಟು ಹೋಗಿದೆ. ಸುತ್ತಮುತ್ತ ಇದ್ದ ಅಂಗಡಿಯವರೆಲ್ಲ ಓಡಿ ಬಂದು ಮಹಿಳೆಯನ್ನು ಮೇಲಕ್ಕೆತ್ತಿದ್ರು. ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಎತ್ತು ದಾಳಿ ಮಾಡಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...