alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನ ವರ್ತನೆಗೆ ದಂಗಾದ ಸಾರ್ವಜನಿಕರು

ಮುಂಬೈನ ಕಲ್ಯಾಣ್ ನಗರದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಪರವಾನಗಿ ತೋರಿಸು ಎಂದು ಆಟೋ ಚಾಲಕನಿಗೆ ಕೇಳಿದ್ದಕ್ಕೆ ಆತ ಮಾಡಿರುವ ವರ್ತನೆಗೆ ಸಾರ್ವಜನಿಕರು ದಂಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.

ಥಾನೆ ಜಿಲ್ಲೆಯ ಕಲ್ಯಾಣ್ ನಗರದಲ್ಲಿ ಈ ಘಟನೆ ನಡೆದಿದ್ದು, ಆಶಾ ಗಾವಂಡ್ ಎನ್ನುವ ಸಂಚಾರಿ ಪೇದೆಯನ್ನು ಆಟೋ ಚಾಲಕ ಆಟೋದಲ್ಲಿ ಎಳೆದುಕೊಂಡು ಹೋಗಿರುವ ಆಘಾತಕಾರಿ ದೃಶ್ಯ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಮಹಿಳಾ ಪೇದೆ, ನಾಗೇಶ್ ಎನ್ನುವ ಆಟೋ ಚಾಲಕನನ್ನು ತಡೆದು ಪರವಾನಗಿ ತೋರಿಸುವಂತೆ ಕೇಳಿದ್ದಾರೆ. ಆದರೆ ಚಾಲಕ ಲೈಸೆನ್ಸ್ ತೋರಿಸುವ ಬದಲು, ಆಟೋ‌ ಚಾಲೂ ಮಾಡಿದ್ದಾನೆ. ಆದರೆ ಇದನ್ನು ತಡೆಯಲು ಆಟೋದ ಕಂಬಿಯನ್ನು ಪೇದೆ ಹಿಡಿತುಕೊಂಡಿದ್ದರೂ, ಆಟೋ ಚಾಲನೆ ಮಾಡಿ, ಆಕೆಯನ್ನು ಎಳೆದುಕೊಂಡು ಹೋಗಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಮಹಿಳಾ ಪೇದೆ ನೆರವಿಗೆ ಬಂದಿದ್ದು, ಸ್ವಲ್ಪ ದೂರ ಎಳೆದುಕೊಂಡು ಹೋದ ಬಳಿಕ, ಆಟೋವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಗಾಯಗೊಂಡಿರುವ ಆಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಗೇಶ್ ನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋ ಚಾಲಕನ ಗೂಂಡಾ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಗೂಂಡಾ ಚಾಲಕನಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...