alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ಬ್ರೆಥಲೈಸರನ್ನೇ ಕಚ್ಚಿಕೊಂಡು ಹೋದ ಭೂಪ

breathalyzerಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಯುವಕನೊಬ್ಬ, ತಪಾಸಣೆಗೆಂದು ಪೊಲೀಸರು ತಡೆದು ನಿಲ್ಲಿಸಿದ ವೇಳೆ ಮಾಡಿದ ಯಡವಟ್ಟಿನ ಕಾರಣಕ್ಕೆ ಈಗ ಜೈಲಿನ ಕಂಬಿ ಎಣಿಸುತ್ತಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಉತ್ತರ ಕೋಲ್ಕತ್ತಾದ ಗಿರೀಶ್ ಪಾರ್ಕ್ ನಿವಾಸಿ ವೇದಾಂತ್ ಅಗರ್ವಾಲ್ ಎಂಬ 22 ವರ್ಷದ ಯುವಕ, ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಪಾರ್ಟಿ ಮುಗಿಸಿಕೊಂಡು ತನ್ನ ತಂದೆಯ ಹುಂಡೈ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ.

ಈ ವೇಳೆ ಆತನ ಕಾರನ್ನು ತಡೆದು ನಿಲ್ಲಿಸಿದ ಪೊಲೀಸರು, ಮದ್ಯಪಾನ ಮಾಡಿದ್ದಾನೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಬ್ರೆಥಲೈಸರ್ ಅನ್ನು ಆತನಿಗೆ ಊದಲು ಕೊಟ್ಟಿದ್ದಾರೆ. ಆತ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಟ್ಟದ ಮದ್ಯ ಸೇವಿಸಿರುವುದು ಗೊತ್ತಾಗಿದ್ದು, ಪೇದೆ, ಮೇಲಾಧಿಕಾರಿಗೆ ವಿಷಯ ತಿಳಿಸಲು ಪಕ್ಕಕ್ಕೆ ತಿರುಗಿದಾಗ ಬಾಯಲ್ಲಿದ್ದ ಬ್ರೆಥಲೈಸರ್ ಸಮೇತ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ಆದರೆ ಆತನ ಕಾರ್ ನಂಬರ್ ನೋಟ್ ಮಾಡಿಕೊಂಡಿದ್ದ ಪೊಲೀಸರು ಅಪರಾತ್ರಿ ಆತನ ಮನೆ ಬಾಗಿಲು ತಟ್ಟಿದಾಗ ಭೂಪ ಆರಾಮಾಗಿ ನಿದ್ರಿಸುತ್ತಿರುವುದು ಕಂಡು ಬಂದಿದೆ. ಆತನನ್ನು ಬಂಧಿಸಿದ ಪೊಲೀಸರು ಕಾರಿನೊಳಗೆ ಬಿಸಾಡಿದ್ದ ಬ್ರೆಥಲೈಸರ್ ನ್ನು ಕಾರಿನ ಸಮೇತ ವಶಕ್ಕೆ ಪಡೆದಿದ್ದಾರೆ. ಇದೀಗ ಆತನ ವಿರುದ್ದ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸಾಮಗ್ರಿಯನ್ನು ಕದ್ದ ಆರೋಪ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದು, ಮಾಡಿದ ಯಡವಟ್ಟಿನಿಂದಾಗಿ ವೇದಾಂತ್ ಅಗರ್ವಾಲ್ ಜೈಲು ಪಾಲಾಗಿದ್ದಾನೆ. ಈ ಕೃತ್ಯವೆಸಗದಿದ್ದರೆ ಆತನಿಗೆ 2 ಸಾವಿರ ರೂ. ದಂಡ ವಿಧಿಸಿ ಬಿಟ್ಟು ಕಳುಹಿಸಲಾಗುತ್ತಿತ್ತು ಎನ್ನಲಾಗಿದ್ದು, ಕುಡಿದ ಅಮಲಿನಲ್ಲಿ ಅತಿ ಬುದ್ದಿವಂತಿಕೆ ಪ್ರದರ್ಶಿಸಲು ಹೋಗಿ ಈಗ ಫಜೀತಿಗೆ ಸಿಲುಕಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...