alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿಯಲ್ಲಿ ಪ್ರೇಯಸಿ ಮನೆ ಪ್ರವೇಶಿಸಿದವನಿಗೆ ಕೂಡಿಬಂತು ‘ಕಂಕಣ ಬಲ’

ಯುವಕನೊಬ್ಬ ಮಧ್ಯರಾತ್ರಿಯಲ್ಲಿ ತನ್ನ ಪ್ರೇಯಸಿ ಮನೆಗೆ ಕಳ್ಳನಂತೆ ಪ್ರವೇಶಿಸಿದ್ದು, ಸಿಕ್ಕಿಬಿದ್ದ ಆತನಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ.

ಘಟನೆ ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿ ನಡೆದಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 25 ವರ್ಷದ ವಿಶಾಲ್ ಸಿಂಗ್ ಎಂಬಾತ ಕಳೆದ ಐದು ವರ್ಷಗಳಿಂದ ನೆರೆ ಗ್ರಾಮದ ತನ್ನ ಸಂಬಂಧಿ ಯುವತಿಯನ್ನು ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದ.

ರಜೆ ಮೇಲೆ ಊರಿಗೆ ಬಂದಿದ್ದ ವಿಶಾಲ್ ಸಿಂಗ್, ಪ್ರೇಯಸಿಯನ್ನು ನೋಡಲು ಮಧ್ಯರಾತ್ರಿ ಆಕೆಯ ಮನೆ ಪ್ರವೇಶಿಸಿದ್ದಾನೆ. ಈ ವೇಳೆ ಎಚ್ಚರಗೊಂಡ ಕುಟುಂಬ ಸದಸ್ಯರೊಬ್ಬರು ಕಳ್ಳ ಕಳ್ಳ ಎಂದು ಕೂಗಿಕೊಂಡಿದ್ದಾರೆ.

ಕೂಡಲೇ ಗ್ರಾಮಸ್ಥರೆಲ್ಲಾ ಸೇರಿಕೊಂಡಿದ್ದು, ವಿಶಾಲ್ ಸಿಂಗ್ ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ಆತನನ್ನು ಗುರುತಿಸಿದವರೊಬ್ಬರು ವಿಶಾಲ್ ಸಿಂಗ್ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.

ಆಗ ವಿಧಿಯಿಲ್ಲದೆ ವಿಶಾಲ್ ಸಿಂಗ್ ತನ್ನ ಪ್ರೇಮ ಕಥೆಯನ್ನು ಹೇಳಿಕೊಂಡಿದ್ದು, ಯುವತಿಯೂ ಇದನ್ನು ಒಪ್ಪಿಕೊಂಡಿದ್ದಾಳೆ. ಕೊನೆಗೆ ಎರಡು ಕುಟುಂಬಗಳ ಹಿರಿಯರೆಲ್ಲರೂ ಸೇರಿ ಇಬ್ಬರ ವಿವಾಹವನ್ನು ನೆರವೇರಿಸಿದ್ದು, ಗ್ರಾಮಸ್ಥರು ಈ ಜೋಡಿಗೆ ಹರಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...