alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರೂ ಬೆಕ್ಕನ್ನು ಹುಡುಕುತ್ತಿರುವುದು ಏಕೆ ಗೊತ್ತಾ..?

cat-223344

ರಾಜಸ್ತಾನದ ಬಾಡ್ಮೇರ್ ನಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆದಿದೆ. ಒಂದು ಬೆಕ್ಕು, ಬಂಗಾರವನ್ನು ತೆಗೆದುಕೊಂಡು ಹೋಗಿದೆ. ಆ ಬೆಕ್ಕು ಎಲ್ಲಿ ಹೋಯಿತೆಂದು ಯಾರಿಗೂ ಗೊತ್ತಿಲ್ಲ.

ಇಲ್ಲಿನ ಧೋರಿಮನ್ನಾ ನಿವಾಸಿ ಫೂಲ್ ರಾಮ್ ಎನ್ನುವವರ ಮನೆಯವರು ತಮ್ಮ ಪ್ರೀತಿಯ ಬೆಕ್ಕಿಗೆ ಶೃಂಗಾರ ಮಾಡಿದ್ದಾರೆ. ಸುಮ್ಮನೆ ಶೃಂಗಾರ ಮಾಡಿಲ್ಲ ಮನೆಯಲ್ಲಿನ ಬಂಗಾರವನ್ನೆಲ್ಲ ತಂದು ಬೆಕ್ಕನ್ನು ಇನ್ನಿಲ್ಲದಂತೆ ಶೃಂಗರಿಸಿದ್ದಾರೆ. ಶೃಂಗಾರ ಮಾಡಿಸಿಕೊಂಡ ಬೆಕ್ಕಿನ ಫೋಟೋ ಸೆಶನ್ ಕೂಡ ಮಾಡಲಾಯಿತು.

ಕೆಲವಷ್ಟು ಫೋಟೋ ತೆಗೆದ ನಂತರ ಮತ್ತೆ ಫೋಟೋ ತೆಗೆಯೋಣವೆಂದರೆ ಎಲ್ಲೂ ಆ ಬೆಕ್ಕು ಕಾಣಿಸಲೇ ಇಲ್ಲ. ಈಗ ಆ ಮನೆಯವರಷ್ಟೇ ಅಲ್ಲ, ಇಡಿ ಊರೇ ಬಂಗಾರದ ಬೆಕ್ಕಿನ ಹುಡುಕಾಟ ನಡೆಸುತ್ತಿದೆ.

ಬೆಕ್ಕನ್ನು ಹುಡುಕಿ ಹುಡುಕಿ ಸೋತ ನಾಗರಿಕರು ಕೊನೆಗೆ ಪೊಲೀಸ್ ಸಹಾಯ ಪಡೆದಿದ್ದಾರೆ. ಅಲ್ಲಿಗೆ ಬಂಗಾರದ ಬೆಕ್ಕಿನ ಕತೆ ಕೇಳಿದ ಪೊಲೀಸರು ಸುಸ್ತಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...