alex Certify
ಕನ್ನಡ ದುನಿಯಾ       Mobile App
       

Kannada Duniya

ಉರುಳಿ ಬಿತ್ತು 50 ಕೋಟಿ ನಗದು ತುಂಬಿದ್ದ ವ್ಯಾನ್

ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ 50 ಕೋಟಿ ರೂಪಾಯಿ ನಗದು ತುಂಬಿದ್ದ ವ್ಯಾನ್ ಅಪಘಾತಕ್ಕೀಡಾದ ಘಟನೆ ನಡೆದಿದೆ. ನಗದು ತುಂಬಿದ್ದ ವ್ಯಾನ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ನಗದು ತುಂಬಿದ್ದ ವ್ಯಾನ್ ಹಾಗೂ ಪೊಲೀಸ್ ವಾಹನ ಎರಡೂ ಅಪಘಾತಕ್ಕೊಳಗಾಗಿದೆ.

ಅದೃಷ್ಟವಶಾತ್ ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸರಿಗೆ ಯಾವುದೇ ಅಪಾಯವಾಗಿಲ್ಲ. ಕ್ಯಾಶ್ ವ್ಯಾನ್ ಅಪಘಾತಕ್ಕೊಳಗಾಗಿದೆ ಎಂಬ ಸುದ್ದಿ ಕೇಳ್ತಿದ್ದಂತೆ ಜನರ ದಂಡು ಘಟನಾ ಸ್ಥಳಕ್ಕೆ ಬರಲು ಶುರುವಾಗಿದೆ. ತಕ್ಷಣ ಎಚ್ಚೆತ್ತ ಪೊಲೀಸ್ ಹಾಗೂ ಬ್ಯಾಂಕ್ ಸಿಬ್ಬಂದಿ ಹಣವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ವ್ಯಾನ್ ಹಾಗೂ ನಗದು ತುಂಬಿದ್ದ ವ್ಯಾನ್ ಹಿಂದೆ ಹಿಂದೆ ಹೋಗುತ್ತಿತ್ತು ಎನ್ನಲಾಗಿದೆ. ಪೊಲೀಸ್ ವ್ಯಾನ್ ಅತಿ ವೇಗದಲ್ಲಿತ್ತಂತೆ. ಮುಂದೆ ಬರ್ತಿದ್ದ ಅನಿಯಂತ್ರಿತ ವಾಹನವನ್ನು ರಕ್ಷಿಸಲು ಹೋಗಿ ಈ ಅಪಘಾತ ನಡೆದಿದೆ. ಹೇಗೋ ತಮ್ಮನ್ನು ಸಂಭಾಳಿಸಿಕೊಂಡ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...