alex Certify
ಕನ್ನಡ ದುನಿಯಾ       Mobile App
       

Kannada Duniya

ಪರದಾಡುತ್ತಿರುವ ಪ್ರವಾಸಿಗರು, ಕಾರ್ಮಿಕರಿಗೆ ಉಚಿತ ಭೋಜನ

free-meal

500 ಮತ್ತು 1000 ರೂಪಾಯಿ ನಿಷೇಧದ ನಂತರ ದಿನಗೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಅಷ್ಟೋ ಇಷ್ಟೋ ಕೂಡಿಟ್ಟಿದ್ದ ಹಣ ಕೂಡ ನೆರವಿಗೆ ಬರ್ತಾ ಇಲ್ಲ.

ಇನ್ನು ಪ್ರವಾಸಿಗರ ಕಥೆಯನ್ನಂತೂ ಕೇಳಲೇಬೇಡಿ. ದೇಶ ನೋಡೋಣ ಅಂತಾ ಬಂದವರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವಂತಹ ಸ್ಥಿತಿ ಬಂದಿದೆ. ರಾಜಸ್ತಾನದಲ್ಲಂತೂ ಕೆಲ ಪ್ರವಾಸಿಗರು ಬೀದಿ ಬದಿಯಲ್ಲಿ ಡ್ಯಾನ್ಸ್ ಮಾಡಿ ಜನರನ್ನು ರಂಜಿಸುತ್ತ ಹಣ ಸಂಪಾದನೆ ಮಾಡಿದ್ದಾರೆ. ಇಂತಹ ಅಸಹಾಯಕ ಪ್ರವಾಸಿಗರು ಮತ್ತು ಕಾರ್ಮಿಕರ ನೆರವಿಗೆ ಸಿಖ್ ಸಮುದಾಯ ಧಾವಿಸಿದೆ.

ಪುಷ್ಕರದ ಗುರುದ್ವಾರದಲ್ಲಿ ಎಲ್ಲರಿಗೂ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿದೆ. ಗುರುದ್ವಾರ ಪ್ರಬಂಧಕ ಕಮಿಟಿ ಉಚಿತ ಭೋಜನದ ವ್ಯವಸ್ಥೆ ಬಗ್ಗೆ  ಪತ್ರಿಕೆಗಳಲ್ಲಿ ಜಾಹೀರಾತನ್ನು ಕೂಡ ನೀಡಿದೆ. ಉಚಿತ ಭೋಜನದ ಅವಶ್ಯಕತೆ ಇರುವವರನ್ನು ತಲುಪಲು ಪಾಂಪ್ಲೆಟ್ ಹಂಚಲು ನಿರ್ಧರಿಸಲಾಗಿದೆ. ಜೊತೆಗೆ ಎಟಿಎಂ ಹಾಗೂ ಬ್ಯಾಂಕ್ ಎದುರು ಕ್ಯೂ ನಿಂತವರ ನೆರವಿಗಾಗಿ ಸ್ವಯಂ ಸೇವಕರನ್ನು ಕಳಿಸಲು ಚಿಂತನೆ ನಡೆದಿದೆ. ಪುಷ್ಕರದ ಗುರುದ್ವಾರಕ್ಕೆ ಬಂದವರ್ಯಾರು ಹಸಿದ ಹೊಟ್ಟೆಯಲ್ಲಿ ವಾಪಸ್ ಹೋಗುವುದಿಲ್ಲ ಅಂತಾ ಕಾರ್ಮಿಕರೆಲ್ಲ ಖುಷಿಯಿಂದ ಹೇಳಿಕೊಳ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...