alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದಾದ್ಯಂತ ಬಹುತೇಕ ಎಟಿಎಂನಲ್ಲಿ ಸಿಗ್ತಿಲ್ಲ ಹಣ

ದೇಶದ ಅನೇಕ ರಾಜ್ಯಗಳಲ್ಲಿ ಮತ್ತೆ ಎಟಿಎಂಗಳಲ್ಲಿ ನಗದಿನ ಸಮಸ್ಯೆ ಎದುರಾಗಿದೆ. ಅನೇಕ ಸಣ್ಣ ನಗರಗಳ ಎಟಿಎಂ ಮುಂದೆ ನೋ ಕ್ಯಾಶ್ ಬೋರ್ಡ್ ನೇತಾಡ್ತಿದೆ.

ಉತ್ತರ ಬಿಹಾರ್, ಗುಜರಾತ್, ಜಾರ್ಖಂಡ್ ಮತ್ತು ಮಧ್ಯಪ್ರದೇಶದ ಅನೇಕ ನಗರ ಹಾಗೂ ಗ್ರಾಮೀಣ ಪ್ರದೇಶದ ಎಟಿಎಂಗಳಲ್ಲಿ ಹಣವಿಲ್ಲ. ಈ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿವೆ. ನೋಟು ನಿಷೇಧದ ವೇಳೆ ಇದ್ದ ಪರಿಸ್ಥಿತಿ ಈಗ ಮತ್ತೆ ನಿರ್ಮಾಣವಾಗಿದೆ ಎಂದು ಜನರು ಆರೋಪ ಮಾಡಿದ್ದಾರೆ.

ಎಟಿಎಂ ನೋ ಕ್ಯಾಶ್ ವಿಚಾರವನ್ನು ಆರ್ ಬಿ ಐ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ತನಿಖೆ ನಡೆಸಲು ರಾಜ್ಯಗಳಲ್ಲಿ ವಿಶೇಷ ಕಮಿಟಿಯನ್ನು ರಚಿಸಿದೆ. ದೆಹಲಿಯ ಅನೇಕ ಪ್ರದೇಶಗಳ ಶೇಕಡಾ 80ರಷ್ಟು ಎಟಿಎಂಗಳಲ್ಲಿ ಹಣವಿಲ್ಲ. ಇದಕ್ಕೆ ಸೂಕ್ತ ಕಾರಣವೇನು ಎಂಬುದನ್ನು ಆರ್ ಬಿ ಐ ಹೇಳಿಲ್ಲ.

ಮೂಲಗಳ ಪ್ರಕಾರ ಬ್ಯಾಂಕ್ ಶಾಖೆಗಳಿಗೆ ಹಣ ಜಮಾ ಮಾಡುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಬ್ಯಾಂಕ್ ಗಳಲ್ಲಿ 2 ಸಾವಿರ ರೂಪಾಯಿ ನೋಟುಗಳೂ ಸರಿಯಾಗಿ ಸಿಗ್ತಿಲ್ಲ. ಇದೇ ಕಾರಣಕ್ಕೆ ಎಟಿಎಂ ಹಾಗೂ ಬ್ಯಾಂಕ್ ಶಾಖೆಗಳಲ್ಲಿ ನಗದು ಸಿಗ್ತಿಲ್ಲ ಎನ್ನಲಾಗ್ತಿದೆ. ನೋಟು ನಿಷೇಧದ ನಂತ್ರ ಆರ್ ಬಿ ಐ 7 ಲಕ್ಷ ಕೋಟಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...