alex Certify
ಕನ್ನಡ ದುನಿಯಾ       Mobile App
       

Kannada Duniya

6 ವರ್ಷದ ಬಾಲಕಿ ಬಟ್ಟೆ ಬಿಚ್ಚಿ ಪ್ರೀತಿ ಮಾಡಿದ್ನಂತೆ ಶಿಕ್ಷಕ

ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕನೊಬ್ಬ ಕ್ಲಾಸಿನಲ್ಲಿಯೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗುವ ಯತ್ನ ನಡೆಸಿದ್ದಾನೆ. ಮಕ್ಕಳನ್ನು ಕಂಪ್ಯೂಟರ್ ನಲ್ಲಿ ಆಟವಾಡಲು ಬೇರೆ ಕ್ಲಾಸಿಗೆ ಕಳುಹಿಸಿದ ಶಿಕ್ಷಕ ಬಾಲಕಿಯನ್ನು ಕ್ಲಾಸ್ ರೂಮಿನಲ್ಲಿ ಉಳಿಸಿಕೊಂಡಿದ್ದಾನೆ. ಯಾರೂ ಇಲ್ಲದ ಸಂದರ್ಭ ನೋಡಿ ಅತ್ಯಾಚಾರವೆಸಗುವ ಯತ್ನ ನಡೆಸಿದ್ದಾನೆ.

ಬಾಲಕಿ ಮನೆಗೆ ಬಂದು ನೋವು ಎಂದಾಗಲೇ ತಾಯಿಗೆ ಸತ್ಯ ಗೊತ್ತಾಗಿದೆ. ವಿಚಾರಿಸಿದಾಗ ಬಾಲಕಿ ಎಲ್ಲ ವಿಷ್ಯವನ್ನು ಹೇಳಿದ್ದಾಳೆ. ಮೊದಲು ಬಟ್ಟೆ ಬಿಚ್ಚಿದ ಶಿಕ್ಷಕ ಪ್ರೀತಿ ಮಾಡಿದ್ದಾನೆ. ನಾನು ನೋವಾಗ್ತಿದೆ ಎಂದು ಅತ್ತ ಮೇಲೆ ನನ್ನನ್ನು ಬಿಟ್ಟಿದ್ದಾರೆಂದು ಬಾಲಕಿ ಹೇಳಿದ್ದಾಳೆ. ಘಟನೆ ಜುಲೈ 6 ರಂದು ನಡೆದಿದೆ.

ಪಂಜಾಬ್ ನ ಲೂದಿಯಾನಾದ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಪಾಲಕರು ಗ್ರಾಮಸ್ಥರಿಗೆ ವಿಷ್ಯ ತಿಳಿಸಿದ್ದಾರೆ. ಗ್ರಾಮಸ್ಥರು ಪಾಲಕರ ಜೊತೆ ಶಾಲೆಗೆ ಹೋದಾಗ ಶಿಕ್ಷಕ ಶೌಚಾಲಯದಲ್ಲಿ ಅಡಗಿದ್ದನಂತೆ. ಆತನಿಗೆ ಹೊಡೆದು ಪ್ರಿನ್ಸಿಪಾಲರಿಗೆ ದೂರು ನೀಡಿದ್ದಾರೆ. 11 ದಿನ ಕಳೆದ್ರೂ ಯಾವುದೇ ಕ್ರಮಕೈಗೊಳ್ಳದ ಕಾರಣ ಬುಧವಾರ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿಂದೆ 5 ನೇ ತರಗತಿ ಬಾಲಕಿ ಮೇಲೂ ಶಿಕ್ಷಕ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೀಘ್ರ ಶಿಕ್ಷಕನನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...