alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಬಿಟ್ಟು ನಾದಿನಿ ಜೊತೆ ಸಂಬಂಧ ಬೆಳೆಸಿದ್ಲು ನವ ವಿವಾಹಿತೆ

ಸಲಿಂಗ ಸಂಬಂಧಕ್ಕೆ ಕಾನೂನು ಮುದ್ರೆ ಬೀಳ್ತಿದ್ದಂತೆ ಕಾನ್ಪುರದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ನವ ವಿವಾಹಿತೆಯೊಬ್ಬಳು ಪತಿ ಬಿಟ್ಟು ನಾದಿನಿ ಜೊತೆ ಸಂಬಂಧ ಬೆಳೆಸಿದ್ದಾಳೆ. ಸುಲಭ್ ಶೌಚಾಲಯದಲ್ಲಿ ಇಬ್ಬರನ್ನು ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಲಾಗಿದೆ. ಈ ವಿಷ್ಯ ಪತಿ ಹಾಗೂ ಮಾವನ ಕಿವಿಗೆ ಮುಟ್ಟಿದೆ. ಆದ್ರೆ ನವವಿವಾಹಿತೆ ನೀಡಿದ ಉತ್ತರ ಮಾತ್ರ ಎಲ್ಲರನ್ನು ದಂಗುಬಡಿಸಿದೆ.

ಘಟನೆ ಸಿವಿಲ್ ಲೈನ್ ಕ್ಷೇತ್ರದಲ್ಲಿ ನಡೆದಿದೆ. ಐದು ತಿಂಗಳ ಹಿಂದೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಮದುವೆ ಫತೇಹಪುರ್ ಹುಡುಗಿ ಜೊತೆ ನಡೆದಿತ್ತು. ವ್ಯಕ್ತಿಯ ಪತ್ನಿ ಹಾಗೂ ಆತನ ವಿವಾಹಿತ ಸಹೋದರಿ ತುಂಬಾ ಸಮಯ ಒಟ್ಟಿಗೆ ಇರ್ತಿದ್ದರಂತೆ. ಒಮ್ಮೆ ತಾಯಿ ಕೈಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿ ಬಿದ್ದಿದ್ದರಂತೆ. ಆದ್ರೆ ಸಲಿಂಗ ಸಂಬಂಧದ ಬಗ್ಗೆ ತಾಯಿ ಆಲೋಚನೆ ಮಾಡಲಿಲ್ಲ.

ದಿನ ಕಳೆದಂತೆ ಇವ್ರ ಪ್ರೀತಿ ಮತ್ತಷ್ಟು ಗಟ್ಟಿಯಾಗ್ತಾ ಬಂದಿತ್ತಂತೆ. ಎರಡು ದಿನಗಳ ಹಿಂದೆ ಸುಲಭ್ ಶೌಚಾಲಯದಲ್ಲಿ ಮಹಿಳೆಯರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ಮನೆಗೆ ಕರೆಯಿಸಿ ಪತಿ ಹಾಗೂ ಕುಟುಂಬಸ್ಥರು ವಿಚಾರಣೆ ನಡೆಸಿದ್ದಾರೆ. ಸಲಿಂಗ ಸಂಬಂಧ ಒಪ್ಪಿಕೊಂಡ ಇಬ್ಬರೂ, ಸಲಿಂಗ ಸಂಬಂಧಕ್ಕೆ ಕಾನೂನು ಒಪ್ಪಿಗೆ ಸಿಕ್ಕಿದೆ. ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ನಮ್ಮ ಮಧ್ಯೆ ಬಂದ್ರೆ ಆತ್ಮಹತ್ಯೆ ಮಾಡಿಕೊಳ್ತೇವೆಂದು ಹೆದರಿಸಿದ್ದಾರೆ. ಪತಿ ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...