alex Certify
ಕನ್ನಡ ದುನಿಯಾ       Mobile App
       

Kannada Duniya

‘ಸತ್ತರೂ ಗೆದ್ದ ಗಂಗಾ’ : 41 ವರ್ಷಗಳ ಬಳಿಕ ಇತ್ಯರ್ಥವಾದ ಕೋರ್ಟ್ ಕೇಸ್

“ನ್ಯಾಯಾಲಯದ ಮೆಟ್ಟಿಲೇರಿ ಗೆದ್ದವನು ಸೋತಂತೆ, ಸೋತವನು ಸತ್ತಂತೆ” ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ಮಹಿಳೆ ಸತ್ತರೂ ಗೆದ್ದಿದ್ದಾಳೆ. ಅಂದರೆ 41 ವರ್ಷಗಳ ಹಿಂದೆ ಆಕೆಯನ್ನು ನ್ಯಾಯಾಲಯದ ಮೆಟ್ಟಿಲೇರಿಸಿದ್ದ ಪ್ರಕರಣವೊಂದು ಇತ್ತೀಚೆಗೆ ಇತ್ಯರ್ಥಗೊಂಡಿದೆ. ಅದರೆ ಗೆಲುವಿನ ನಿಟ್ಟುಸಿರುಬಿಡಬೇಕಾಗಿದ್ದ ಆಕೆ ಕೊನೆಯುಸಿರೆಳೆದು ವರ್ಷಗಳೇ ಕಳೆದಿವೆ.

ಇಂಥದ್ದೊಂದು ಪ್ರಕರಣ ನಡೆದಿದ್ದು ವಾರಾಣಸಿಯಲ್ಲಿ ಹಾಗೂ ಸತ್ತೂ ಗೆದ್ದ ಆ ಮಹಿಳೆಯ ಹೆಸರು ಗಂಗಾದೇವಿ. ಗಂಗಾ ಅವರ ಆಸ್ತಿ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಮಿರ್ಜಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ನೋಟಿಸ್ ಕಳಿಸಿದ್ದರು. ಇದು ನಡೆದಿದ್ದು 1975 ರಲ್ಲಿ ಹಾಗೂ ಗಂಗಾಗೆ ಅಗ 37 ರ ವಯಸ್ಸು. ಎರಡು ವರ್ಷ ಈ ಪ್ರಕರಣ ನಡೆದಿದ್ದು, ಕೊನೆಗೆ 1977 ರಲ್ಲಿ ಸಿವಿಲ್ ಜಡ್ಜ್ ಅವರು ಗಂಗಾ ಪರವಾಗಿಯೇ ತೀರ್ಪು ನೀಡಿದ್ದರು.

ಆದರೆ ಇನ್ನೇನು ಆದೇಶದ ಪ್ರತಿ ಕೈಗೆ ಸಿಗಬೇಕು ಎಂಬಷ್ಟರಲ್ಲಿ ಪ್ರಕರಣಕ್ಕೆ ಸಂಬಂಧಿತ 312 ರೂಪಾಯಿ ಕೋರ್ಟ್ ಫೀಸನ್ನು ಗಂಗಾ ಪಾವತಿಸಿಲ್ಲ ಎಂದು ಯಾರೋ ನ್ಯಾಯಾಲಯದ ಗಮನಕ್ಕೆ ತಂದಿದ್ದರಿಂದ ಮತ್ತು ಪಾವತಿಸಿದ ಬಗ್ಗೆ ಸೂಕ್ತ ದಾಖಲೆ ಸಲ್ಲಿಸದ್ದರಿಂದ ಆದೇಶ ತಡೆ ಹಿಡಿಯಲಾಗಿತ್ತು. ನಾನು ಈಗಾಗಲೇ ಕೋರ್ಟ್ ಫೀ ಪಾವತಿಸಿದ್ದೇನೆ ಎಂದು ವಾದಿಸಿದ್ದ ಗಂಗಾ ಪುನಃ ಫೀಸ್ ಪಾವತಿಸಲು ನಿರಾಕರಿಸಿದ್ದರು.

ಇತ್ತೀಚೆಗೆ ಅಂದರೆ ಆಗಸ್ಟ್ 31ರಂದು ಮಿರ್ಜಾಪುರ ಸಿವಿಲ್ ನ್ಯಾಯಾಧೀಶರು ಈ ಕೇಸ್ ಇತ್ಯರ್ಥಗೊಳಿಸುವ ಮೂಲಕ ಗಂಗಾ ಪರವಾಗಿ ತೀರ್ಪು ನೀಡಿ 41 ವರ್ಷಗಳ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಆದರೆ 2005 ರಲ್ಲೇ ಗಂಗಾ ನಿಧನರಾದ್ದರಿಂದ ಆಕೆ ಸತ್ತೂ ಗೆದ್ದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...