alex Certify
ಕನ್ನಡ ದುನಿಯಾ       Mobile App
       

Kannada Duniya

ತೈಲ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಯಲ್ಲಿ ‘ಕೈ’ ನಾಯಕರ ಸವಾರಿ

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಸೋಮವಾರ ರಾಷ್ಟ್ರವ್ಯಾಪಿ ಬಂದ್ ಮಾಡಲಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಭಿನ್ನ, ವಿಭಿನ್ನ ರೀತಿ ಪ್ರತಿಭಟನೆ ನಡೆಸಿದ್ರು. ಅದ್ರಂತೆ ಛತ್ತೀಸ್ಗಢದ ಕೈ ನಾಯಕರು ಎತ್ತಿನ ಗಾಡಿ ಏರಿ ಪ್ರತಿಭಟಿಸಿದ್ದಾರೆ.

ತೈಲ ಬೇಲೆ ಗಗನಕ್ಕೆ ಮುಟ್ಟಿದ್ದನ್ನು ತೋರಿಸಲು, ಕಾಂಗ್ರೆಸ್ ನಾಯಕರು ಕಾರ್ ಗಳಿಗೆ ಗುಡ್ ಬೈ ಹೇಳಿದ್ರು. ಎತ್ತಿನ ಗಾಡಿಗಳನ್ನು ಹತ್ತಿದ ಶಾಸಕರು ವಿಧಾನಸಭೆಗೆ ಎತ್ತಿನ ಗಾಡಿಯಲ್ಲಿ ಬಂದಿದ್ದಾರೆ.

ವಿಧಾನಸಭೆಗೆ ಬರಲು ಎತ್ತಿನ ಗಾಡಿ ಬಳಸುವ ಪ್ಲಾನ್ ಮಾಡಿಕೊಂಡ ಶಾಸಕರು, ಮಂಗಳವಾರ ಈ ರೀತಿ ವಿಭಿನ್ನವಾಗಿ ಪ್ರತಿಭಟಿಸಿದ್ರು. ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದ್ರಿಂದ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಹೀಗಾಗಿ ವಿರೋಧ ವ್ಯಕ್ತಪಡಿಸಲು ಎತ್ತಿನ ಗಾಡಿ ಏರಿದ್ದಾಗಿ ಹೇಳಿದ್ದಾರೆ ಕಾಂಗ್ರೆಸ್ ನಾಯಕರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...