alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿ ಪ್ರಾಣ ಉಳಿಸಲು ನೆರವಾಯ್ತು ವಾಟ್ಸಾಪ್

ಸಾಮಾಜಿಕ ಜಾಲತಾಣದ ಬಗ್ಗೆ ಆರೋಪಗಳು ಕೇಳಿ ಬರ್ತಿರುತ್ತವೆ. ಆದ್ರೆ ಕೆಲವೊಮ್ಮೆ ಇದೇ ಸಾಮಾಜಿಕ ಜಾಲತಾಣ ಅನೇಕರಿಗೆ ನೆರವಾಗಿದೆ. ಜಮ್ಮು-ಕಾಶ್ಮೀರದ ರೋಗಿಯೊಬ್ಬನ ಪ್ರಾಣ ಉಳಿಸಲು ವಾಟ್ಸಾಪ್ ನೆರವಾಗಿದೆ.

ಜಮ್ಮು-ಕಾಶ್ಮೀರದ ಬನಿಹಾಲ್ ನಲ್ಲಿ ಘಟನೆ ನಡೆದಿದೆ. 27 ವರ್ಷದ ವ್ಯಕ್ತಿಗೆ ಎದೆನೋವು ಕಾಣಿಸಿಕೊಂಡಿತ್ತು. ಆತ ರಾಮ್ಬನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ. ಅಲ್ಲಿನ ವೈದ್ಯರು ಇಸಿಜಿ ಮಾಡಿದ್ದಾರೆ. ಆಗ ಹೃದಯಾಘಾತವಾಗಿರುವ ಸಂಗತಿ ಗೊತ್ತಾಗಿದೆ. ಇಸಿಜಿ ವರದಿಯನ್ನು ವೈದ್ಯ ಹಿರಿಯ ವೈದ್ಯರಿಗೆ ವಾಟ್ಸಾಪ್ ಮಾಡಿದ್ದಾರೆ.

ಹಿರಿಯ ವೈದ್ಯರ ಸಲಹೆಯಂತೆ ರೋಗಿಗೆ ಕಿರಿ ವೈದ್ಯ ಥ್ರಂಬೊಲಿಸಿಸ್ ಮಾಡಿದ್ದಾರೆ. ಇದ್ರಿಂದ ರಕ್ತ ಹೆಪ್ಪುಗಟ್ಟುವುದು ನಿವಾರಣೆಯಾಗಿ ರೋಗಿ ಪ್ರಾಣ ಉಳಿದಿದೆ. ವೈದ್ಯ ನಜಮ್ ಪ್ರಕಾರ, ಇಂಥ ರೋಗಿಗಳಿಗೆ ಮೊದಲ ಒಂದು ಗಂಟೆಯಲ್ಲಿ ಚಿಕಿತ್ಸೆ ಅಗತ್ಯವಿರುತ್ತದೆ. ವಿಳಂಬ ಮಾಡಿದ್ರೆ ಪ್ರಾಣಕ್ಕೆ ಹಾನಿಯುಂಟಾಗುತ್ತದೆ. ಗೋಲ್ಡನ್ ಅವರ್ ನಲ್ಲಿ ಬೇರೆ ವೈದ್ಯರನ್ನು ಇಲ್ಲಿಗೆ ಕರೆಯಿಸಿಕೊಳ್ಳುವುದು ಕಷ್ಟವಾಗ್ತಿತ್ತು. ವಾಟ್ಸಾಪ್ ಮೂಲಕ ಇಸಿಜಿ ವರದಿ ಕಳುಹಿಸಿದ್ದರಿಂದ ಪ್ರಾರಂಭಿಕ ಚಿಕಿತ್ಸೆ ನೀಡಲಾಗಿದೆ. ಮುಂದಿನ ಚಿಕಿತ್ಸೆಗಾಗಿ ರೋಗಿಯನ್ನು ಶ್ರೀನಗರಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...