alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯತೆಯನ್ನೇ ಮರೆತ ಯುಪಿ ಪೊಲೀಸರು…!

ಉತ್ತರ ಪ್ರದೇಶದ ಸಹರನ್ಪುರದಲ್ಲಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಜೀವನ್ಮರಣ ಹೋರಾಟ ನಡೆಸ್ತಾ ಇದ್ದ ಇಬ್ಬರು ಹುಡುಗರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದಾರೆ. ಇದಕ್ಕೆ ಅವರು ಕೊಟ್ಟ ಕಾರಣ ಮಾತ್ರ ಅತ್ಯಂತ ಕ್ಷುಲ್ಲಕ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

17 ವರ್ಷದ ಅರ್ಪಿತ್ ಖುರಾನಾ ಹಾಗೂ ಸನ್ನಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ರು. ಅವರಲ್ಲಿ ಚಲನೆಯೇ ಇರಲಿಲ್ಲ. ಪಕ್ಕದಲ್ಲೇ ಬೈಕ್ ಬಿದ್ದುಕೊಂಡಿತ್ತು. ಸಾರ್ವಜನಿಕರು ಅವರನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿದ್ರು. ಅಷ್ಟರಲ್ಲಿ ನೈಟ್ ಪೆಟ್ರೋಲಿಂಗ್ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

ಆದ್ರೆ ತಮ್ಮ ಕಾರಿನ ಸೀಟುಗಳು ರಕ್ತಸಿಕ್ತವಾಗುತ್ತವೆ ಅನ್ನೋ ಕಾರಣಕ್ಕೆ ಗಾಯಗೊಂಡಿದ್ದ ಹುಡುಗರನ್ನು ಆಸ್ಪತ್ರೆಗೆ ಕರೆದೊಯ್ಯಲು ಒಪ್ಪಿಲ್ಲ. ಅಲ್ಲಿ ಪೊಲೀಸ್ ವಾಹನ ಬಿಟ್ರೆ ಇನ್ಯಾವ ಕಾರು ಇರಲಿಲ್ಲ. ಹಾಗಾಗಿ ಎಲ್ಲರೂ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವಂತೆ ಬೇಡಿಕೊಂಡಿದ್ದಾರೆ.

ನಿಮ್ಮ ಕಾರನ್ನು ಚೆನ್ನಾಗಿ ತೊಳೆದು ಕ್ಲೀನ್ ಮಾಡಿಕೊಡುತ್ತೇವೆ ಅಂತಾ ಭರವಸೆ ನೀಡಿದ್ದಾರೆ. ಆದ್ರೂ ಪೊಲೀಸರು ಮಾನವೀಯತೆ ತೋರಿಲ್ಲ. ಕಾರನ್ನು ತೊಳೆದರೆ ರಾತ್ರಿ ಪೂರ್ತಿ ನಾವೆಲ್ಲಿ ಕೂರೋಣ ಅಂತಾ ಮರುಪ್ರಶ್ನೆ ಹಾಕಿದ್ದಾರೆ. ಅಷ್ಟೊತ್ತಿಗೆ ಸ್ಥಳೀಯ ಪೊಲೀಸ್ ಠಾಣೆಯ ವಾಹನ ಸ್ಥಳಕ್ಕೆ ಬಂದಿತ್ತು.

ನಂತರ ಗಾಯಗೊಂಡಿದ್ದ ಹುಡುಗರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಆದ್ರೆ ಅಷ್ಟರಲ್ಲಾಗ್ಲೇ ಇಬ್ಬರೂ ಮೃತಪಟ್ಟಿದ್ದರು. ಪ್ರತ್ಯಕ್ಷದರ್ಶಿಯೊಬ್ಬ ಪೊಲೀಸರ ಅಮಾನುಷ ವರ್ತನೆಯನ್ನು ವಿಡಿಯೋ ಮಾಡಿದ್ದಾನೆ. ಸದ್ಯ ಆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...