alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಮೇಲೆ ಕಾರು ಹರಿದ್ರೂ ಎದ್ದು ಆಟವಾಡಲು ಓಡಿದ ಬಾಲಕ…!

ಆಯಸ್ಸು ಗಟ್ಟಿಯಿದ್ರೆ ಯಮನ ಕೈನಲ್ಲೂ ಏನು ಮಾಡೋಕೆ ಆಗಲ್ಲ ಎಂಬ ಮಾತಿದೆ. ಇದಕ್ಕೆ ಈ ಬಾಲಕ ಉತ್ತಮ ನಿದರ್ಶನ. ಮುಂಬೈನ ಘಾಟ್ಕೋಪರ್ ನಲ್ಲಿ ಬಾಲಕನ ಮೇಲೆ ಕಾರು ಹರಿದು ಹೋಗಿದೆ. ಆದ್ರೆ ಬಾಲಕನಿಗೆ ಸಣ್ಣ ಗಾಯವೂ ಆಗಿಲ್ಲ. ಏನೂ ಆಗಿಲ್ಲ ಎನ್ನುವಂತೆ ಎದ್ದು ಆಟವಾಡಲು ಹೋಗಿದ್ದಾನೆ ಬಾಲಕ.

ಕಾಮರಾಜ್ ನಗರದ ಸೊಸೈಟಿಯೊಂದರಲ್ಲಿ ಘಟನೆ ನಡೆದಿದೆ. ಕಾರು ಬಾಲಕನ ಮೇಲೆ ಹಾದು ಹೋದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಾರ್ ಹರಿದು ಹೋದ ಮೇಲೂ ಬಾಲಕ ಹೇಗೆ ಎದ್ದು ಹೋಗಿದ್ದಾನೆ ಎಂಬುದೂ ಇದ್ರಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸೆಪ್ಟೆಂಬರ್ 24ರಂದು ಘಟನೆ ನಡೆದಿದೆ ಎನ್ನಲಾಗ್ತಿದೆ.

ಕಾರನ್ನು ಮಹಿಳೆ ಚಲಾಯಿಸುತ್ತಿದ್ದಳು. ಘಟನೆಗೆ ನಿರ್ಲಕ್ಷ್ಯ ಕಾರಣ ಎಂಬುದು ಸ್ಪಷ್ಟವಾಗಿದೆ. ಫುಟ್ಬಾಲ್ ಆಡ್ತಿದ್ದ ಮಕ್ಕಳಲ್ಲಿ ಒಬ್ಬ ಬಾಲಕ ಶೂ ಕಟ್ಟಿಕೊಳ್ಳಲು ಕುಳಿತುಕೊಂಡಿದ್ದಾನೆ. ಅದನ್ನು ನೋಡದೆ ಚಾಲಕಿ ಕಾರು ಚಲಾಯಿಸಿದ್ದಾಳೆ. ಕಾರು ಹತ್ತಿರ ಬರ್ತಿದ್ದಂತೆ ಬುದ್ದಿ ಉಪಯೋಗಿಸಿದ ಬಾಲಕ ಮಲಗಿದ್ದಾನೆ. ಕಾರು ಹಾದು ಹೋಗ್ತಿದ್ದಂತೆ ಎದ್ದು ಮಕ್ಕಳ ಜೊತೆ ಆಟವಾಡಲು ಹೋಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...