alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದ ಪಾರಿವಾಳವೀಗ ಪಂಜರದಲ್ಲಿಲ್ಲ..!

piegon

ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದ ಗೂಢಚಾರಿ ಪಾರಿವಾಳ ಪಂಜರದಿಂದ ತಪ್ಪಿಸಿಕೊಂಡಿದೆ. ಕುತೂಹಲಕ್ಕೆ ಅಂತಾ ನಿನ್ನೆ ಪಂಜಾಬ್ ನ ಶ್ರೀವಿಜಯ್ ನಗರದಲ್ಲಿ ಪೊಲೀಸ್ ಪೇದೆ ಪಂಜರದ ಬಾಗಿಲು ತೆರೆದಿದ್ದ. ಸಿಕ್ಕಿದ್ದೇ ಚಾನ್ಸ್ ಎಂದುಕೊಂಡ ಪಾರಿವಾಳ ಅಲ್ಲಿಂದ ಹಾರಿ ಮರಳಿ ಪಾಕಿಸ್ತಾನಕ್ಕೆ ಪರಾರಿಯಾಗಿದೆ.

ಇದು ಪಾಕಿಸ್ತಾನದ ಗೂಢಚಾರಿ ಪಾರಿವಾಳವೆಂದೇ ಹೇಳಲಾಗಿತ್ತು. ಯಾಕಂದ್ರೆ ಅದರ ಕತ್ತಿನಲ್ಲಿ ‘5547 ಜನ್ಬಾಜ್ ಖಾನ್’ ಎಂದು ಬರೆದಿದ್ದ ಟ್ಯಾಗ್ ಒಂದನ್ನು ನೇತು ಹಾಕಲಾಗಿತ್ತು. ಜೊತೆಗೆ ಫೋನ್ ನಂಬರ್ ಕೂಡ ಇತ್ತು.

ಸತತ ಎರಡು ಗಂಟೆಗಳ ಕಾಲ ಶ್ರಮಪಟ್ಟು ಪೊಲೀಸರು ಅದನ್ನು ಸೆರೆಹಿಡಿದಿದ್ದರು. ಕಳೆದ ವರ್ಷ ಪಠಾಣ್ ಕೋಟ್ ಉಗ್ರ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವಣ ಸಂಘರ್ಷ ತಾರಕಕ್ಕೇರಿತ್ತು. ಈ ವೇಳೆ ಪಾಕಿಸ್ತಾನದ ಗಡಿಯಿಂದ ಭಾರತದೊಳಕ್ಕೆ ಹಾರಿಬಂದಿದ್ದ ಪಾರಿವಾಳಗಳು, ಗಿಡುಗ ಮತ್ತು ಬಲೂನ್ ಗಳನ್ನು ಪೊಲೀಸರು ಸೆರೆಹಿಡಿದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...