alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲ್ಲವೆಂದ್ರು ಮಾಯಾವತಿ

ಬಿ.ಎಸ್.ಪಿ ಅಧಿನಾಯಕಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರಿಗೆ ತಾವಿರುವ ಬಂಗಲೆಯನ್ನು ಖಾಲಿ ಮಾಡುವಂತೆ ಉತ್ತರ ಪ್ರದೇಶ ಸರ್ಕಾರ ತಿಳಿಸಿತ್ತು. ಆದ್ರೀಗ ಮಾಯಾವತಿ, ಆ ಬಂಗಲೆಯನ್ನು ಬಿ.ಎಸ್.ಪಿ. ಸಂಸ್ಥಾಪಕ ಕಾನ್ಶಿರಾಮ್ ಅವರ ಸ್ಮಾರಕವಾಗಿ ಪರಿವರ್ತಿಸಲಾಗಿದೆ ಅಂತಾ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ 13 ಎ ಮಾಲ್ ಅವೆನ್ಯೂ ಬಂಗಲೆ ಖಾಲಿ ಮಾಡುವಂತೆ ಮಾಯಾವತಿಗೆ ನೋಟಿಸ್ ಕಳಿಸಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ಪತ್ರ ಬರೆದಿರುವ ಮಾಯಾವತಿ, ತಾವು ವಾಸಿಸುತ್ತಿರುವ 13 ಎ ಮಾಲ್ ಅವೆನ್ಯೂ ಬಂಗಲೆಯನ್ನು ಈಗಾಗಲೇ ಕಾನ್ಶಿರಾಮ್ ಸ್ಮಾರಕ ಎಂದು ಘೋಷಿಸಿದ್ದಾರಂತೆ.

2011 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗಲೇ ಅದನ್ನು ಕಾನ್ಶಿರಾಮ್ ಸ್ಮಾರಕ ಮಾಡಿದ್ದು, ಆ ಬಂಗಲೆಯ ಕೇವಲ 2 ರೂಮ್ ಗಳಲ್ಲಿ ಮಾತ್ರ ನಾನು ವಾಸಿಸುತ್ತಿದ್ದೆ ಅಂತಾ ಪತ್ರದಲ್ಲಿ ತಿಳಿಸಿದ್ದಾರೆ. ಇದೇ ವೇಳೆ ತಾವು ಭದ್ರತೆಯ ದೃಷ್ಟಿಯಿಂದ ಆ ಬಂಗಲೆಯಲ್ಲಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ 2011 ರಲ್ಲಿ ಎಸ್ಟೇಟ್ ಇಲಾಖೆ, ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗದಲ್ಲಿ ತಮಗೆ ಹಂಚಿಕೆ ಮಾಡಿದ್ದ ನಿವಾಸವನ್ನು ಶೀಘ್ರದಲ್ಲೇ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...