alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಹಾರದಲ್ಲಿ ಮತ್ತೊಂದು ಪರೀಕ್ಷಾ ಕರ್ಮಕಾಂಡ

exam-1

ಪರೀಕ್ಷೆಗಳಲ್ಲಿ ಹೊಸ ಹೊಸ ಬಗೆಯ ಮೋಸಕ್ಕೆ ಬಿಹಾರ ಹೆಸರುವಾಸಿ. ಇದಕ್ಕೆ ಲೇಟೆಸ್ಟ್ ಉದಾಹರಣೆ ಅಂದ್ರೆ ಬಿಹಾರ ಸ್ಟಾಫ್ ಸೆಲೆಕ್ಷನ್ ಕಮಿಷನ್. BSSC ಪರೀಕ್ಷಾ ಪ್ರಶ್ನೆ ಪತ್ರಿಕೆ ಆನ್ ಲೈನ್ ನಲ್ಲಿ ಲಭ್ಯವಾದ್ರೆ, ಉತ್ತರಗಳು 5-6 ಲಕ್ಷ ರೂಪಾಯಿಗೆ ಬಿಕರಿಯಾಗ್ತಿವೆ.

ಈ ಮೋಸದ ಜಾಲವನ್ನು ಬೇಧಿಸಿರುವ ವಿಶೇಷ ತನಿಖಾ ತಂಡದ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಅವರಲ್ಲಿ ನಾಲ್ವರು ಖಾಸಗಿ ಶಾಲೆ ಹಾಗೂ ಕೋಚಿಂಗ್ ಸೆಂಟರ್ ಗಳನ್ನು ನಡೆಸ್ತಾ ಇದ್ರು. ಇನ್ನೋರ್ವ BSSC ಸೆಕ್ರೆಟರಿ ಪರಮೇಶ್ವರ್ ರಾಮ್, ಮತ್ತೋರ್ವ ಡೇಟಾ ಆಪರೇಟರ್ ಅವಿನಾಶ್ ಕುಮಾರ್.

ಸರ್ಕಾರಿ ಉದ್ಯೋಗಕ್ಕಾಗಿ ನಕಲಿ ಪ್ರಮಾಣಪತ್ರ ನೀಡುವ ಜಾಲದಲ್ಲೂ ಇವರು ಶಾಮೀಲಾಗಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಎರಡನೇ ಹಂತದ ಪರೀಕ್ಷೆಯ ಪ್ರಶ್ನೆಪತ್ರಿಕೆ ಆನ್ ಲೈನ್ ನಲ್ಲಿ ಸೋರಿಕೆಯಾದ ಬಳಿಕ ಈ ಅಕ್ರಮ ಬಯಲಾಗಿದೆ. ಜನವರಿ 29, ಫೆಬ್ರವರಿ 5, ಫೆ.19 ಮತ್ತು ಫೆ.26ಕ್ಕೆ ಪರೀಕ್ಷೆಗಳು ನಿಗದಿಯಾಗಿದ್ದವು. ಆರಂಭದಲ್ಲಿ ಅಭ್ಯರ್ಥಿಗಳಿಂದ ತಲಾ 20,000 ರೂಪಾಯಿ ಪಡೆದು ಉತ್ತರಗಳನ್ನು ಖದೀಮರು ವಾಟ್ಸಾಪ್ ಮೂಲಕ ಕಳುಹಿಸಿದ್ರು. ಪ್ರತಿ ಅಭ್ಯರ್ಥಿಯಿಂದ್ಲೂ ಕಂತಿನಲ್ಲಿ ಒಟ್ಟು 5-6 ಲಕ್ಷ ರೂಪಾಯಿ ಪಡೆದುಕೊಳ್ಳಲು ಸ್ಕೆಚ್ ಹಾಕಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...