alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತಿಮ ಆಸೆ ಈಡೇರಿಸಲು ಪತಿ ಶವದ ಜೊತೆ ಕೆನಡಾದಿಂದ ಬಂದ್ಲು ಮಹಿಳೆ

ತವರಿನ ಮಣ್ಣಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದ್ರಲ್ಲೂ ವಿದೇಶದಲ್ಲಿ ನೆಲೆಸಿರುವವರು ತವರಿನ ಮಣ್ಣನ್ನು ಹೆಚ್ಚು ಮಿಸ್ ಮಾಡಿಕೊಳ್ತಾರೆ. ಬಿಹಾರ ರೋಹ್ತಾಸ್ ನ ದೆಹರಿಯ ಮುನ್ನು ಅನ್ಸಾರಿ ಜೀವನದಲ್ಲೂ ಇದೇ ಆಗಿದೆ.

ದೆಹರಿಯ ಮುನ್ನು ಅನ್ಸಾರಿ ಕೆನಡಾದಲ್ಲಿ ವಾಸವಾಗಿದ್ದರು. ಅಲ್ಲಿ ಪ್ರೊಫೆಸರ್ ಕೆಲಸ ಮಾಡುತ್ತಿದ್ದರು. ಕ್ಯಾನ್ಸರ್ ಕಾರಣದಿಂದ ಅವರು ನಿಧನರಾಗಿದ್ದಾರೆ. ಕೊನೆ ಉಸಿರೆಳೆಯುವ ಮುನ್ನ ಅನ್ಸಾರಿ ತಮ್ಮ ಕೊನೆ ಆಸೆ ವ್ಯಕ್ತಪಡಿಸಿದ್ದರು. ತನ್ನ ತವರಿನ ಮಣ್ಣಲ್ಲಿ ನನ್ನನ್ನು ಮಣ್ಣು ಮಾಡಬೇಕೆಂದು ಅನ್ಸಾರಿ ಹೇಳಿದ್ದರು.

ಪತಿ ಅಂತಿಮ ಆಸೆ ಈಡೇರಿಸಲು ಕೈರೆನ್ 21 ದಿನಗಳ ಕಾಲ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಭಾರತಕ್ಕೆ ಬಂದ್ರು. ಸುಮಾರು 50 ಗಂಟೆಗಳ ಕಾಲ ವಿಮಾನ ಪ್ರಯಾಣ ಹಾಗೂ ರಸ್ತೆ ಪ್ರಯಾಣ ಮುಗಿಸಿ ಪತಿ ಶವವನ್ನು ತವರಿನಲ್ಲಿ ಹೂಳಿದ್ದಾಳೆ ಕೈರೆನ್.

ಕೈರೆನ್ ವೈದ್ಯಕೀಯ ವಿಜ್ಞಾನಿ. ಅನ್ಸಾರಿಗೆ ದೇಶದ ಮೇಲೆ ಬಹಳ ಪ್ರೀತಿಯಿತ್ತಂತೆ. ಕೆಲಸಕ್ಕಾಗಿ ವಿದೇಶಕ್ಕೆ ಹೋದ್ರೂ ಸತ್ತ ಮೇಲೆ ತವರಿನಲ್ಲಿ ಮಣ್ಣಾಗಬೇಕು. ಆಗ ಮಾತ್ರ ಆತ್ಮಕ್ಕೆ ನೆಮ್ಮದಿ ಎಂದಿದ್ದರಂತೆ. ಅವರ ಕೊನೆ ಆಸೆ ಈಡೇರಿಸಲು ಇಲ್ಲಿಗೆ ಬಂದ ಕೈರೆನ್ ಭಾರತದಲ್ಲಿಯೇ ಮುಂದಿನ ಜೀವನ ಕಳೆಯಲು ನಿರ್ಧರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...