alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಬಾ ರಾಮ್ದೇವ್ ಹೇಳಿಕೆಗೆ ಬಿಜೆಪಿ ಶಾಕ್

ಬೆಲೆ ಏರಿಕೆ ಬಗ್ಗೆ ತಣ್ಣನೆ ಅಸಮಾಧಾನ ಹೊರ ಹಾಕಿರುವ ಯೋಗ ಗುರು ರಾಮ್ ದೇವ್ 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರ ಬಹಿರಂಗವಾಗಿ ನಿಲ್ಲುವುದು ಅನುಮಾನ ಎನ್ನುವ ವಾತಾವರಣ ಸೃಷ್ಟಿಯಾಗಿದೆ.

ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ನಾನು ರಾಜಕೀಯದಿಂದ ದೂರ ಇದ್ದೇನೆ. ಯಾವುದೇ ಪಕ್ಷದೊಂದಿಗೆ ನಾನು ಗುರುತಿಸಿಕೊಂಡಿಲ್ಲ ಎಂದು ಹೇಳಿದರು.

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪರವಾಗಿ ಅಭಿಪ್ರಾಯ ನೀಡುತ್ತಾ ಅಖಾಡಕ್ಕಿಳಿದಿದ್ದ ರಾಮ್ ದೇವ್ ಈ ಬಾರಿ ನಾನೇಕೆ ಪ್ರಚಾರಕ್ಕೆ ಎಂದು ಪ್ರಶ್ನೆ ಎತ್ತಿದ್ದಾರೆ. ಈ ಮೂಲಕ ಪರೋಕ್ಷವಾಗಿ ತಮ್ಮ ನಿಲುವು ಹೊರಹಾಕಿದ್ದಾರೆ.

ಅಷ್ಟೇ ಅಲ್ಲದೇ ತಮಗೆ ಪೆಟ್ರೋಲ್-ಡೀಸಲ್ ಮಾರಾಟಕ್ಕೆ ಅವಕಾಶ ಸಿಕ್ಕರೆ ಈಗಿನ ಅರ್ಧ ಬೆಲೆಗೆ ಮಾರಾಟ ಮಾಡುವೆನು ಎಂದು ಕೇಂದ್ರದ ನಿಲುವನ್ನು ಪರೋಕ್ಷವಾಗಿ ಕಟಕಿಯಾಡಿದ್ದಾರೆ.

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ನಾನೇಕೆ ಪ್ರಚಾರ ಮಾಡಬೇಕು ಎಂದು ಪ್ರಶ್ನೆ ಎತ್ತಿರುವ ಅವರು, ಬೆಲೆ ಏರಿಕೆಗೆ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂಬ ಅರ್ಥ ಬರುವ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋದಿಯನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಈ ನಡುವೆಯೂ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ಕ್ಲೀನ್ ಇಂಡಿಯಾ ಮಿಷನ್ ಪ್ರಾರಂಭಿಸಲಾಗಿದೆ, ಹಾಗೆಯೆ ಯಾವುದೇ ಹಗರಣಗಳಿಗೆ ಆಸ್ಪದ ನೀಡಿಲ್ಲ ಎಂದು ಶಬ್ಬಾಸ್ ಗಿರಿ ನೀಡಿದ್ದಾರೆ.

ಇಂಧನವನ್ನೂ ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂಬ ಜನ ಸಾಮಾನ್ಯರ ಕೋರಿಕೆ ಹಾಗೂ ಪ್ರತಿಪಕ್ಷದ ಬೇಡಿಕೆಯನ್ನೂ ರಾಮ್ ದೇವ್ ಬೆಂಬಲಿಸಿದರು. ಹಾಗೆಯೇ ಗರಿಷ್ಠ ತೆರಿಗೆ ಮಿತಿಯನ್ನು ಅಳವಡಿಸದೇ ಶ್ರೀಮಂತರಿಗೆ ಹೆಚ್ಚು ತೆರಿಗೆ ಹಾಕುವುದು ಒಳ್ಳೆಯದು ಎಂದು ಅಭಿಪ್ರಾಯ ನೀಡಿದರು.

ಪತಂಜಲಿ ಆಯುರ್ವೇದ ಉತ್ಪನ್ನಗಳಿಂದ ಖ್ಯಾತವಾದ ರಾಮ್ ದೇವ್, ಅಗ್ಗದ ದರದಲ್ಲಿ ಪೆಟ್ರೋಲ್ ಮಾರಾಟ ಮಾಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ, ನನಗೆ ಅವಕಾಶ ಸಿಕ್ಕರೆ ಪ್ರತಿ ಲೀಟರ್ ಗೆ 35ರಿಂದ 40 ರೂಪಾಯಿಗೆ ದೊರೆಯುವಂತೆ ಮಾಡುವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...