alex Certify
ಕನ್ನಡ ದುನಿಯಾ       Mobile App
       

Kannada Duniya

6 ವರ್ಷದಲ್ಲಿ ಅರ್ಧಕ್ಕೆ ಶಾಲೆ ಬಿಟ್ಟಿದ್ದಾರೆ 42 ಲಕ್ಷ ಮಕ್ಕಳು

ಮಧ್ಯಪ್ರದೇಶದಲ್ಲಿ ಅತ್ಯಾಚಾರ ಹಾಗೂ ಮಹಿಳಾ ಅಪರಾಧ ಪ್ರಕರಣ ಹೆಚ್ಚಾಗ್ತಿದೆ. ಎನ್ ಸಿಆರ್ಬಿ ಈ ಬಗ್ಗೆ ಇತ್ತೀಚಿಗಷ್ಟೇ ವರದಿ ನೀಡಿದೆ. ಈ ಮಧ್ಯೆ ಸಿಎಜಿ ನೀಡಿರುವ ವರದಿ ಮಧ್ಯಪ್ರದೇಶದ ಜನ ತಲೆ ತಗ್ಗಿಸುವಂತೆ ಮಾಡಿದೆ. ವರದಿ ಪ್ರಕಾರ ಕೆಲವೇ ಕೆಲವು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಮಧ್ಯದಲ್ಲಿಯೇ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 42 ಲಕ್ಷ ತಲುಪಿದೆ.

ರಾಜ್ಯ ಹಣಕಾಸು ಸಚಿವ ಜಯಂತ್ ಸಿಎಜಿ ನೀಡಿದ ವರದಿಯನ್ನು ವಿಧಾನಸಭೆ ಮುಂದಿಟ್ಟಿದ್ದಾರೆ. ವರದಿ ಪ್ರಕಾರ, ಕಳೆದ ಆರು ವರ್ಷಗಳಲ್ಲಿ 42.86 ಲಕ್ಷ ಮಕ್ಕಳು  ಮಧ್ಯದಲ್ಲಿಯೇ ಶಾಲೆ ಬಿಟ್ಟಿದ್ದಾರೆ. ಇದ್ರಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ 28 ಲಕ್ಷವಿದೆ. 14.86 ಲಕ್ಷ ಮಕ್ಕಳು ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆದ ನಂತ್ರ ಮಧ್ಯದಲ್ಲಿಯೇ ಶಾಲೆ ಬಿಟ್ಟಿದ್ದಾರೆ.

ರಾಜ್ಯದಲ್ಲಿ 2015-2016ರಲ್ಲಿ 7.44 ಲಕ್ಷ ಮಕ್ಕಳು ಶಾಲೆ ಬಿಟ್ಟಿದ್ದಾರೆ. ಅತಿ ಹೆಚ್ಚು ಮಕ್ಕಳು ಮಧ್ಯದಲ್ಲಿಯೇ ಶಾಲೆ ತೊರೆಯುವ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ ನಾಲ್ಕನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ರಾಜಸ್ಥಾನ ಮತ್ತು ಮಹಾರಾಷ್ಟ್ರ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...