alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲುಗಳು ‘ವಿಳಂಬ’ವಾಗಿ ನಿಲ್ದಾಣ ತಲುಪಲು ಕಾರಣವೇನು ಗೊತ್ತಾ…?

ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದ್ದರೂ ಇದನ್ನು ಕಾರ್ಯಗತಗೊಳಿಸುವಲ್ಲಿ ಎಡರು ತೊಡರುಗಳು ಎದುರಾಗುತ್ತಿವೆ. ಅದರಲ್ಲೂ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2017-18 ನೇ ಸಾಲಿನಲ್ಲಿ ರೈಲುಗಳು ವಿಳಂಬವಾಗಿ ನಿಲ್ದಾಣಕ್ಕೆ ತಲುಪುತ್ತಿರುವ ಪ್ರಮಾಣದಲ್ಲಿ ಶೇಕಡಾ 5.30 ರಷ್ಟು ಏರಿಕೆಯಾಗಿದೆ.

ಸಿಎಜಿ ತನ್ನ ವರದಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಈ ಹಿಂದೆ ರೈಲುಗಳು ನಿಗದಿತ ಸಮಯದಲ್ಲಿ ನಿಲ್ದಾಣ ತಲುಪುತ್ತಿದ್ದುದರ ಪ್ರಮಾಣ ಶೇಕಡ 76.69 ರಷ್ಟಿದ್ದು, ಈಗ ಆ ಪ್ರಮಾಣ ಶೇಕಡಾ 71.39 ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

ರೈಲುಗಳ ವಿಳಂಬಕ್ಕೆ ಕಾರಣವನ್ನೂ ಸಿಎಜಿ ಬಹಿರಂಗಪಡಿಸಿದ್ದು, ರೈಲ್ವೆ ಇಲಾಖೆ ಒಂದು ಲಕ್ಷ ಕೋಟಿ ರೂ. ವೆಚ್ಚದಲ್ಲಿ ದೇಶದ ಹಲವು ನಿಲ್ದಾಣಗಳ ಆಧುನೀಕರಣ ಕಾರ್ಯವನ್ನು ಕೈಗೊಂಡಿದ್ದು, ಇದರಿಂದಾಗಿ ರೈಲುಗಳು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.

ಬಹಳಷ್ಟು ರೈಲು ನಿಲ್ದಾಣಗಳಲ್ಲಿ 24 ಅಥವಾ ಅದಕ್ಕಿಂತ ಹೆಚ್ಚಿನ ಬೋಗಿಗಳಿರುವ ರೈಲುಗಳನ್ನು ನಿಲ್ಲಿಸುವ ಸೌಲಭ್ಯವಿಲ್ಲ. ಹೀಗಾಗಿ ಈ ರೈಲುಗಳು ನಿಗದಿತ ನಿಲ್ದಾಣದಿಂದ ಮತ್ತೊಂದು ರೈಲು ತೆರಳುವವರೆಗೂ ಸಮೀಪದ ಟ್ರ್ಯಾಕ್ ನಲ್ಲಿ ಕಾದು ನಿಲ್ಲಬೇಕಾಗಿದೆ ಎಂದು ವರದಿ ಹೇಳಿದೆ. ಹೀಗೆ ರೈಲು ವಿಳಂಬಕ್ಕೆ ಕಾರಣವಾಗುವ ಹಲವು ವಿಚಾರಗಳನ್ನು ಸಿಎಜಿ ತನ್ನ ವರದಿಯಲ್ಲಿ ವಿವರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...